ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಲಿನ ಬಳಿಕ ನಿವೃತ್ತ CJI ಚಂದ್ರಚೂಡ್‌ ವಿರುದ್ಧ ಅಸಮಾಧಾನ ಹೊರಹಾಕಿದ ಉದ್ಧವ್‌, ರಾವುತ್‌

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನಾ(ಯುಬಿಟಿ) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಪಕ್ಷದ ನಾಯಕರಾದ ಉದ್ಧವ್‌ ಠಾಕ್ರೆ ಹಾಗೂ ಸಂಜಯ್ ರಾವುತ್‌ ಅವರು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ವಿರುದ್ಧ ಟೀಕೆ ಮಾಡಿದ್ಧಾರೆ.

ಶನಿವಾರ, ಫಲಿತಾಂಶ ವಿಶ್ಲೇಷಿಸಿದ್ದ ಉದ್ಧವ್‌ ಠಾಕ್ರೆ, ಶಿವಸೇನಾ ಪಕ್ಷ ಇಬ್ಭಾಗವಾದ ಕುರಿತು ನ್ಯಾಯಮೂರ್ತಿ ಚಂದ್ರಚೂಡ್‌ ಅವರು ತೀರ್ಪು ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ಈ ವಿಚಾರದಲ್ಲಿ ಗೊಂದಲವಿದೆ. ಶಿವಸೇನಾ ಹಾಗೂ ಎನ್‌ಸಿಪಿ ಬಣಗಳ ಹೆಸರು, ಚಿಹ್ನೆ ವಿಚಾರವಾಗಿ ಎರಡು ವರ್ಷ ಕಳೆದರೂ ಸುಪ್ರೀಂ ಕೋರ್ಟ್‌ ತೀರ್ಪು ನೀಡಿಲ್ಲ. ಹೀಗಿದ್ದರೂ ಚುನಾವಣೆಗಳು ನಡೆದಿವೆ. ಹಾಗಾಗಿ, ಯಾರನ್ನು ನಾವು ನಂಬಬೇಕು? ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು’ ಎಂದು ಉದ್ಧವ್‌ ಹೇಳಿದ್ದರು..

ಇದೇ ವಿಚಾರವಾಗಿ, ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಕೂಡ ನಿವೃತ್ತ ಸಿಜೆಐ ಚಂದ್ರಚೂಡ್‌ ವಿರುದ್ಧ ಭಾನುವಾರ ಟೀಕಾಪ್ರಹಾರ ನಡೆಸಿದರು. ಪಕ್ಷಾಂತರ ಮಾಡುವವರಲ್ಲಿ ಕಾನೂನು ಬಗ್ಗೆ ಇದ್ದ ಹೆದರಿಕೆಯನ್ನು ಚಂದ್ರಚೂಡ್‌ ದೂರ ಮಾಡಿದ್ದಾರೆ. ಚರಿತ್ರೆಯಲ್ಲಿ ಅವರ ಹೆಸರನ್ನು ಕಪ್ಪು ಅಕ್ಷರಗಳಲ್ಲಿ ಬರೆಯಲಾಗುತ್ತದೆ ಎಂದು ರಾವುತ್‌ ಟೀಕಿಸಿದರು.

ಪಕ್ಷಾಂತರ ಮಾಡಿದ ಶಾಸಕರ ಅನರ್ಹತೆ ಕುರಿತ ಅರ್ಜಿಗಳಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳದಿರುವ ಮೂಲಕ ಚಂದ್ರಚೂಡ್‌ ಅವರು ಪಕ್ಷಾಂತರಕ್ಕೆ ಮುಕ್ತ ಅವಕಾಶ ಕೊಟ್ಟಿದ್ದಾರೆ’ ಎಂದು ಹೇಳಿದರು.

ಇತ್ತೀಚಿನ ಚುನಾವಣಾ ರ‍್ಯಾಲಿಗಳಲ್ಲಿ ಕೂಡ ಉದ್ಧವ್‌ ಈ ವಿಚಾರವಾಗಿ ಮಾತನಾಡಿದ್ದರು. ಇತಿಹಾಸದಲ್ಲಿ ನಿಮ್ಮ ಹೆಸರು ಉಳಿಯಬೇಕು ಎಂದು ನೀವು ನಿಜವಾಗಿಯೂ ಬಯಸಿದ್ದಲ್ಲಿ, ಈಗ ನಿಮ್ಮ ಮುಂದೆ ಅವಕಾಶ ಇದೆ. ನಿವೃತ್ತರಾಗುವ ಮೊದಲೇ ಆ ಕೆಲಸ ಮಾಡಿ, ಪ್ರಜಾಪ್ರಭುತ್ವ ಉಳಿಸಿ’ ಎಂದು ಠಾಕ್ರೆ ಹೇಳಿದ್ದರು.

Edited By : Abhishek Kamoji
PublicNext

PublicNext

25/11/2024 11:22 am

Cinque Terre

129.88 K

Cinque Terre

1

ಸಂಬಂಧಿತ ಸುದ್ದಿ