ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಜನರಿಂದ ತಿರಸ್ಕೃತರಾದವರು ಗೂಂಡಾಗಿರಿಯಿಂದ ಸಂಸತ್ತು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ" : ಮೋದಿ

ನವದೆಹಲಿ: ಸಾರ್ವಜನಿಕರಿಂದ ತಿರಸ್ಕೃತರಾಗಿರುವ ಕೆಲವರು ಬೆರಳೆಣಿಕೆಯ ಜನರ ಗೂಂಡಾಗಿರಿಯ ಮೂಲಕ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಂಸತ್ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ ಹೊರಗೆ ಮಾತನಾಡಿದ ಅವರು, ‘ಕೆಲವರು ಹೊಸ ಸಂಸದರ ಆಲೋಚನೆಗಳು, ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2024ನೇ ವರ್ಷದ ಕೊನೆಯ ಹಂತವು ನಡೆಯುತ್ತಿದೆ ಮತ್ತು ದೇಶವು 2025ರ ಹೊಸ ವರ್ಷ ಬರಮಾಡಿಕೊಳ್ಳಲು ತಯಾರಿ ನಡೆಸುತ್ತಿದೆ. ಸಂಸತ್ತಿನ ಈ ಅಧಿವೇಶನವು ಹಲವಾರು ವಿಧಗಳಲ್ಲಿ ವಿಶೇಷವಾಗಿದೆ. ಅದರಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನಾಳೆ ಎಲ್ಲರೂ ನಮ್ಮ ಸಂವಿಧಾನದ 75ನೇ ವರ್ಷವನ್ನು ಆಚರಿಸುತ್ತಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಮೋದಿ, ಜನರಿಂದ ತಿರಸ್ಕೃತಗೊಂಡಿರುವ ಕೆಲವರು, ತಮ್ಮ ಕೈಯಲ್ಲಿರುವ ಬೆರಳೆಣಿಕೆ ಜನರನ್ನು ಬಳಸಿಕೊಂಡು ಗೂಂಡಾಗಿರಿಯ ಮೂಲಕ ಸಂಸತ್ತಿನ ಮೇಲೆ ಹಿಡಿತ ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ದೇಶದ ಜನರು ಅವರ ಕರ್ಮಗಳನ್ನು ಎಣಿಸುತ್ತಾರೆ ಮತ್ತು ಸಮಯ ಬಂದಾಗ, ಅವರನ್ನೂ ಶಿಕ್ಷಿಸುತ್ತಾರೆ ಎಂದರು.

80 ರಿಂದ 90 ಬಾರಿ ನಿರಂತರವಾಗಿ ಜನರಿಂದ ತಿರಸ್ಕೃತಗೊಂಡವರು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ. ಅವರು ಪ್ರಜಾಪ್ರಭುತ್ವದ ಮನೋಭಾವವನ್ನೇ ಗೌರವಿಸುವುದಿಲ್ಲ ಅಥವಾ ಜನರ ಆಕಾಂಕ್ಷೆಗಳ ಮಹತ್ವವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ಯಾವುದೇ ಜವಾಬ್ದಾರಿಯೂ ಇಲ್ಲ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

Edited By : Abhishek Kamoji
PublicNext

PublicNext

25/11/2024 12:39 pm

Cinque Terre

118.72 K

Cinque Terre

7

ಸಂಬಂಧಿತ ಸುದ್ದಿ