ನವದೆಹಲಿ: ಈ ತಿಂಗಳ 28 ರ ಒಳಗೆ ಬಿಪಿಎಲ್ ಕಾರ್ಡ್ ಗೊಂದಲ ಸರಿಪಡಿಸಿ ಅಕ್ಕಿ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಅಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಅವರು, ಎಲ್ಲಾ ಪಡಿತರ ಕಾರ್ಡುಗಳನ್ನು ಯತಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಗಳ ಆದೇಶದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಮ್ಮ ರಾಜ್ಯದ ಕೇಂದ್ರದ ಸಚಿವರನ್ನು ಭೇಟಿಯಾಗಲು ನವ ದೆಹಲಿಗೆ ಬಂದಿದ್ದೇನೆಂದು ತಿಳಿಸಿದ ಸಚಿವರು, ನವೆಂಬರ್ 28ರೊಳಗೆ ಎಲ್ಲಾ ಪಡಿತರ ಕಾರ್ಡಗಳನ್ನು ಸರಿಪಡಿಸಿ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಎಲ್ಲಾ ಸೌಲಭ್ಯಗಳೊಂದಿಗೆ ಅಕ್ಕಿಯನ್ನು ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಅರ್ಹ ಫಲಾನಿಭವಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದ್ದು, ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರ ಅನರ್ಹ ಪಡಿತರ ಕಾರ್ಡುಗಳನ್ನು ಎ.ಪಿ.ಎಲ್ ಗೆ ವರ್ಗಾಹಿಸಲಾಗುವುದು ಎಂದರು.ನಮ್ಮ ಸರ್ಕಾರ ಬಡವರ ಪರವಾದ ಯೋಜನೆಗಳೊಂದಿಗೆ ಜನರ ಅಭಿವೃದ್ಧಿಯನ್ನು ಮಾಡುತ್ತಿದ್ದು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
PublicNext
25/11/2024 10:48 pm