ನವಜೋತ್ ಸಿಂಗ್ ಸಿಧು ಮಡದಿ ನಾಲ್ಕನೇ ಸ್ಟೇಜ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇದೀಗ ಸಂಪೂರ್ಣವಾಗಿ ಗುಣ ಮುಖರಾಗಿದ್ದಾರೆಂದು ಸಿಂಗ್ ಪತ್ರಿಕಾ ಗೋಷ್ಠಿ ನಡೆಸಿ ತಿಳಿಸಿದ್ದಾರೆ. ವೈದ್ಯರು ಹೇಳಿದ ಪ್ರಕಾರ ಬದುಕುವ ಸಾಧ್ಯತೆ ಕೇವಲ ಶೇಕಡ ಮೂರರಷ್ಟು ಇದ್ದರೂ ಹೆಂಡತಿಯನ್ನು ನಾನು ಹೇಗೆ ಬಚಾವ್ ಮಾಡಿಕೊಂಡೆ ಎಂದು ವಿವರಿಸಿದ್ದಾರೆ. ನವಜೋತ್ ಸ್ಟ್ರಿಕ್ಟ್ ಡಯಟ್ ಇದಕ್ಕೆ ಕಾರಣವೆಂದು ಹೇಳಿದ್ರೆ ಅವ್ರ ಮಾತನ್ನು ವೈದ್ಯರು ಒಪ್ಪಲು ತಯಾರಿಲ್ಲ.ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ಇರುವ ಆಹಾರವನ್ನು ನೀಡದೆ ಉರಿಯೂತದ ( anti-inflammatory ) ಆಹಾರಗಳನ್ನು ನೀಡಿದ್ದರಿಂದ ಚೇತರಿಸಿಕೊಳ್ಳಲು ಸಹಾಯವಾಗಿದೆ ಎಂಬುವುದು ಸಿಂಗ್ ವಾದ.ವೈದ್ಯರು ಹೇಳ್ತಾರೆ ಕೇವಲ ಆಹಾರವೊಂದೇ ಕ್ಯಾನ್ಸರ್ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದ್ದಕ್ಕೆ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.ಮೆಟಾಸ್ಟಾಟಿಕ್ ಕ್ಯಾನ್ಸರ್ ಅನ್ನು ಗಿಡಮೂಲಿಕೆ ಔಷಧಿ ಮತ್ತು ಆಹಾರಕ್ರಮವು ಗುಣಪಡಿಸಬಹುದು ಎಂದು ಎಲ್ಲೂ ಅಧ್ಯಯನ ನಡೆದಿಲ್ಲ.ಪ್ರತಿಯೊಬ್ಬರೂ ವಿಭಿನ್ನ ದೇಹ ರಚನೆಯನ್ನು ಹೊಂದಿರುವುದರಿಂದ, ಉರಿಯೂತದ ಆಹಾರಗಳು ಕ್ಯಾನ್ಸರ್ನ ಎಲ್ಲಾ ಹಂತಗಳಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ ಎಂದು ಡಾ. ಸುಮೀತ್ ಹೇಳಿದ್ದಾರೆ. ಏನೇ ಇರಲಿ ನವಜೋತ್ ಸಿಂಗ್ ಸಿಧು ಮಡದಿ ಸಾವಿನ ಮನೆಯಿಂದ ಗೆದ್ದು ಬಂದಿರುವುದಂತು ನಿಜ.
PublicNext
25/11/2024 08:44 pm