ಅಮ್ಮನ ಹಳೆಯ ಸೀರೆಯಲ್ಲಿ ಲಂಗಾ ದಾವಣಿ, ಸ್ಕರ್ಟ್ ಬ್ಲವ್ಸ್, ಸ್ಲೀವ್ ಲೆಸ್ ಬ್ಲವ್ಸ್ ಹಾಕಿ ಮಾಡರ್ನ್ ಲುಕ್ ಕೊಟ್ಟು ಮತ್ತೇ ಬಳಸುವುದು ಕಾಮನ್. ಆದರೆ ಇಲ್ಲೊಬ್ಬಳು ಹುಡುಗಿ ಅಪ್ಪನ ಮದುವೆಯ ಬ್ಲೇಸರ್ ಅನ್ನೇ ನವೀಕರಿಸಿ ಹೊಸ ಲುಕ್ ನೀಡಿ ವಿನ್ಯಾಸಗೊಳಿಸಿದ್ದಾಳೆ.ಮಹಿಳೆಯರು ತಮ್ಮ ಮದುವೆಯ ದಿನ ಅಥವಾ ವಿಶೇಷ ಸಂದರ್ಭಕ್ಕಾಗಿ ತಮ್ಮ ತಾಯಿಯ ಸೀರೆಯನ್ನು ಧರಿಸುತ್ತಾರೆ.ಡಿಜಿಟಲ್ ಕ್ರಿಯೇಟರ್ ನಿವೇಶಿ ಹಳೆ ಸೂಟ್ ಗೆ ಹೊಸ ಲುಕ್ ಕೊಟ್ಟು ಆ ವೀಡಿಯೋ ಇನ್ಸ್ಟಾ ಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.ಆಕೆಯ ಪೋಷಕರ ಮದುವೆಯ ಚಿತ್ರಗಳೊಂದಿಗೆ ವೀಡಿಯೋ ಆರಂಭವಾಗಿ ತನಗಾಗಿ ಉಡುಪನ್ನು ಹೇಗೆ ಬದಲಾಯಿಸದಳು ಅನ್ನುವವರೆಗಿನ ವೀಡಿಯೋ ಶೇರ್ ಮಾಡಿದ್ದಾಳೆ.ಸನ್ಗ್ಲಾಸ್, ಪೀಪ್-ಟೋ ಹೀಲ್ಸ್, ಬ್ರೇಸ್ಲೆಟ್ ವಾಚ್, ಚಿನ್ನದ ಹೂಪ್ ಕಿವಿಯೋಲೆಗಳು, ಸೊಗಸಾದ ನೆಕ್ ಚೈನ್ ಮತ್ತು ಕಪ್ಪು ಬ್ಯಾಗ್ ನೊಂದಿಗೆ ಅಪ್ಪನ ಸೂಟ್ ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಳು ನಿವೇಶಿ.
PublicNext
25/11/2024 08:27 pm