ಪುಷ್ಪ ಬೆಡಗಿ ರಶ್ಮಿಕಾ ಮಂದಣ್ಣ ಅವರು ಚೆನ್ನೈನಲ್ಲಿ ನಡೆದ ‘ಪುಷ್ಪ 2’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಲವ್ ಲೈಫ್ ಬಗ್ಗೆ ನಟಿ ಇನ್ ಡೈರೆಕ್ಟ್ ಆಗಿ ಸುಳಿವು ನೀಡಿದ್ದಾರೆ. ಭಾವಿ ಪತಿ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾಗಿದ್ದಾರೆ.
ರಶ್ಮಿಕಾ ಜೊತೆ ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ, ವೇದಿಕೆಯಲ್ಲಿ ಮದುವೆಗೆ ಸಂಬಂಧಿಸಿದ ಪ್ರಶ್ನೆಯನ್ನು ರಶ್ಮಿಕಾಗೆ ಕೇಳಲಾಯಿತು. ರಶ್ಮಿಕಾ ಸ್ವಲ್ಪ ಹೊತ್ತು ಯೋಚಿಸಿ ನಂತರ ನಗುತ್ತಲೇ ಅವರು ನಿಮಗೆಲ್ಲ ಅವರು ಗೊತ್ತು ಎಂದು ಸುಳಿವು ನೀಡಿದರು.
ನೀವು ಚಿತ್ರರಂಗದ ಯಾರನ್ನಾದರೂ ಮದುವೆಯಾಗುತ್ತೀರಾ? ಅಥವಾ ಹೊರಗಿನವರಾ? ಎಂದು ಮತ್ತೆ ಕೇಳಿದಾಗ, ಅದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ರಶ್ಮಿಕಾ ನಕ್ಕರು. ನಮಗೆ ಗೊತ್ತಿಲ್ಲ. ಒಂದು ಸಣ್ಣ ಸುಳಿವು ಕೊಡಿ ಎಂದು ಮತ್ತೆ ಪ್ರಶ್ನಿಸಿದಾಗ ಹಾಗೆ ಹೇಳುವುದು ಬೇಡ. ನಾನೇ ಖುದ್ದಾಗಿ ಒಂದು ದಿನ ಎಲ್ಲವನ್ನೂ ಹೇಳುತ್ತೇನೆ ಎಂದು ನಗುತ್ತಲೇ ರಶ್ಮಿಕಾ ತಿಳಿಸಿದರು.ರಶ್ಮಿಕಾ ಮಂದಣ್ಣ ಅವರ ಈ ಮಾತುಗಳು ಅಭಿಮಾನಿಗಳ ತಲೆ ಕೆಡಿಸಿದೆ. ರಶ್ಮಿಕಾ ಮತ್ತು ವಿಜಯ್ ಪ್ರೀತಿಯಲ್ಲಿ ಬಿದ್ದಿದ್ದು, ಶೀಘ್ರದಲ್ಲೇ ಈ ವಿಚಾರ ರಿವೀಲ್ ಮಾಡಬಹುದು ಎಂದು ಊಹಿಸುತ್ತಿದ್ದಾರೆ ಅವರ ಅಭಿಮಾನಿಗಳು.
PublicNext
25/11/2024 06:13 pm