ಶಿಮ್ಲಾ: ತಂತ್ರಜ್ಞಾನ ಯಾವ ರೀತಿಯಿಂದಲಾದರೂ ದುರ್ಬಳಕೆ ಆಗಿರಬಹುದು. ಹೀಗಾಗಿ ಇವಿಎಂ ಹೊರತಾಗಿ ಬ್ಯಾಲೆಟ್ ಪೇಪರ್ ಮೂಲಕ ಚನಾವಣೆ ಮಾಡಿ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವಿಎಂ ಬಗ್ಗೆ ಇರುವ ಅನುಮಾನಗಳಿಗೆ ಮೊದಲು ಸ್ಪಷ್ಟತೆ ಸಿಗಬೇಕು. ಎಂತದ್ದೇ ತಂತ್ರಜ್ಞಾನ ಇದ್ದರೂ ಅದನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಎಲಾನ್ ಮಸ್ಕ್ ಕೂಡ ಇದನ್ನೇ ಹೇಳಿದ್ದಾರೆ. ಹೀಗಾಗಿ ನಮಗೆ ಇವಿಎಂ ಬೇಡ. ಬ್ಯಾಲೆಟ್ ಪೇಪರ್ಅನ್ನೇ ವಾಪಸ್ ಜಾರಿಗೆ ತಂದು ಅದರ ಮೂಲಕವೇ ಚುನಾವಣೆ ನಡೆಸಿ ಎಂದು ಸುಖವಿಂದರ್ ಆಗ್ರಹಿಸಿದ್ದಾರೆ.
PublicNext
25/11/2024 05:39 pm