ನವದೆಹಲಿ: ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಹಣಕಾಸು ಅಕ್ರಮ ಹಾಗೂ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಆಗಲೇಬೇಕು ಎಂದು ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, ನಿಯಮ 267ರ ಅಡಿ ಈ ವಿಷಯ ಚರ್ಚೆ ಆಗಬೇಕು. ಅದಾನಿ ಗ್ರೂಪ್ ವಿರುದ್ಧ ಭ್ರಷ್ಟಾಚಾರ, ಲಂಚ ಮತ್ತು ಹಣಕಾಸು ಅಕ್ರಮಗಳ ಗಂಭೀರ ಆರೋಪಗಳಿವೆ. ನಾವು ಅದನ್ನು ಸದನದ ಮುಂದೆ ಇಡಲು ಬಯಸಿದ್ದೇವೆ. ಈ ಬಗ್ಗೆ ಕೂಲಂಕುಷ ಚರ್ಚೆಗೆ ಸಭಾಪತಿಗಳು ಅವಕಾಶ ನೀಡಬೇಕೆಂದು ಖರ್ಗೆ ಒತ್ತಾಯಿಸಿದ್ದಾರೆ.
PublicNext
25/11/2024 05:16 pm