ಕಾಗವಾಡ:ವಿಧ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಬಾರದೆ ತಮ್ಮ ಉಜ್ಜ್ವಲ ಭವಿಷ್ಯದ ಸಲುವಾಗಿ ಹೆಚ್ಚು ವಿಧ್ಯಾಭ್ಯಾಸ ಕಡೆ ಗಮನ ಹರಿಸಿಬೇಕು ಎಂದು ಕಾಗವಾಡ ಪಿಎಸ್ಐ ಜಿ ಜಿ ಬಿರಾದಾರ ಹೇಳಿದರು.
ಅವರು ಶುಕ್ರವಾರ ತಾಲ್ಲೂಕಿನ ಮಂಗಸೂಳಿ ಗ್ರಾಮದ ಸರಕಾರಿ ಮರಾಠಿ ಪೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುತ್ತಾ ಮಾತನಾಡಿದ ಅವರು ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್ ಗಳ ಬಳಕೆ ಯಿಂದ ಅನೇಕ ರೀತಿಯ ತೊಂದರೆ ಅನುಭವಿಸುತ್ತಿದ್ದು ಪಾಲಕರು ಇದರ ಬಗ್ಗೆ ಕಾಳಜಿ ವಹಿಸಬೇಕು ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡಬೇಕು ಮತ್ತು ಮಕ್ಕಳು ಅಗತ್ಯ ಇದ್ದಾಗ ಮಾತ್ರ ಬಳಕೆ ಮಾಡಬೇಕು ಬಳಕೆಯ ಸಮಯದಲ್ಲಿ ಪೇಸ್ ಬುಕ್, ವ್ಯಾಟ್ಸಪ್,ಈನ್ಸ್ಟಾಗ್ರಾಮ ನಂತಹ ಸಾಮಾಜಿಕ ಜಾಲತಾಣಗಳಿಂದ ದೂರ ಇರಬೇಕು ನಿಮಗೆ ಶಾಲಾ ಸಮಯದಲ್ಲಿ ಅಥವಾ ಹೊರಗಡೆ ಸಮಯದಲ್ಲಿ ಯಾರಾದರೂ ತೊಂದರೆ ಕೊಡುತ್ತಿದ್ದರೆ ಕೂಡಲೇ ಪೋಲಿಸ್ ಸಹಾಯ ವಾಣಿ 122 ಗೆ ಕರೆ ಮಾಡಬೇಕು ಅಥವಾ ಮಕ್ಕಳ ಸಾಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆ ಪರಿಹರಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು ಈ ವೇಳೆ ಶಿಕ್ಷಕರು ಹಾಗೂ ಪೋಲೀಸ ಸಿಬ್ಬಂದಿಗಳು ಇದ್ದರು.
Kshetra Samachara
24/11/2024 07:27 pm