ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಭತ್ತದ ಕೊಯ್ಲು ಮತ್ತು ರಾಶಿ ಜೋರಾಗಿದೆ. ಆದರೆ, ಕಷ್ಟ ಪಟ್ಟು ಬೆಳೆದ ಭತ್ತಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇನ್ನೂ ಸರ್ಕಾರ ಖರೀದಿ ಕೇಂದ್ರಗಳನ್ನು ಕೂಡ ಆರಂಭಿಸದೇ ಇರುವುದು ರೈತರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.
ಬೆಳಗಾವಿ, ಖಾನಾಪುರ ಮತ್ತು ಕಿತ್ತೂರು ತಾಲ್ಲೂಕಿನ ಭಾಗದಲ್ಲಿ ಒಟ್ಟು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಭತ್ತದ ಕಟಾವು ಕಳೆದ ಒಂದು ವಾರದಿಂದ ಶುರುವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 1 ಕ್ವಿಂಟಾಲ್ ಭತ್ತಕ್ಕೆ 2150-2200 ರೂ. ದರ ನಿಗದಿ ಆಗಿದೆ.
ಇದು ರೈತರಿಗೆ ಸಮಾಧಾನ ತಂದಿಲ್ಲ. ಯಾಕೆಂದರೆ ಕಳೆದ ವರ್ಷ 3000 ವರೆಗೆ ಭತ ಮಾರಾಟವಾಗಿದೆ. ಆದರೆ ಈಗಿರುವ ಬೆಲೆಯಿಂದ 1 ಎಕರೆಯಲ್ಲಿ ಭತ್ತ ಬೆಳೆಯಲು ಬೀಜ, ಗೊಬ್ಬರ, ನಾಟಿ-ಕಟಾವು ಮಾಡುವುದು ಸೇರಿ ಸರಾಸರಿ 54 ಸಾವಿರ ರೂ. ಖರ್ಚು ಆಗುತ್ತದೆ. ಆದರೆ, ಈಗಿನ ದರ ನೋಡಿದರೆ ಹಾಕಿದ ಖರ್ಚು ಕೂಡ ಬರುವುದಿಲ್ಲ ಎನ್ನುವುದು ರೈತರ ಅಳಲು.
ಜಿಲ್ಲೆಯಲ್ಲಿ ಇಂದ್ರಾಯಿಣಿ, ಬಾಸುಮತಿ, ಶುಭಾಂಗಿ, ಚಿಟಕಾ ಸೇರಿ ಮತ್ತಿತರ ತಳಿಯ ಭತ್ತವನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿನ ಭತ್ತ ರಾಜ್ಯ, ಹೊರ ರಾಜ್ಯಗಳಿಗೂ ರಫ್ತಾಗುತ್ತದೆ. ಮುಂದೆ ಅದೇ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗಿ, ವ್ಯಾಪಾರಿಗಳಿಗೆ ಅಧಿಕ ಲಾಭವಾಗುತ್ತದೆ. ಆದರೆ, ಕಷ್ಟ ಪಟ್ಟು ಬೆಳೆಯುವ ರೈತರಿಗೆ ಮಾತ್ರ ಅದರ ಲಾಭ ಸಿಗದಿರುವುದು ವಿಪರ್ಯಾಸ.
ಬೆಳಗಾವಿ ಮತ್ತು ಖಾನಾಪುರದಲ್ಲಿ ಭತ್ತದ ಖರೀದಿ ಕೇಂದ್ರ ತೆರೆಯಲಾಗಿದೆ. 1 ಕ್ವಿಂಟಾಲ್ ಗೆ 2300-2310 ರೂ. ದರ ನಿಗದಿ ಪಡಿಸಲಾಗಿದೆ. ಆದರೆ, ಪ್ರತಿಯೊಬ್ಬ ರೈತರಿಂದ ಎಷ್ಟು ಎಕರೆಯಲ್ಲಿ ಬೆಳೆದ, ಎಷ್ಟು ಕ್ವಿಂಟಾಲ್ ಭತ್ತ ಖರೀದಿಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸಬೇಕಿದೆ.
Kshetra Samachara
25/11/2024 03:37 pm