ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಒಣ ಬೇವಿನ ಮರ ತೆರವುಗೊಳಿಸಲು ಆಗ್ರಹ

ಬೈಲಹೊಂಗಲ: ಮುರಗೋಡ ಪ್ರವಾಸಿ ಮಂದಿರ ಕ್ರಾಸ್‍ನಿಂದ ರಾಮಾಪೂರ ಹಾಗೂ ನಾನಾ ಗ್ರಾಮಗಳಿಗೆ ತೆರಳುವ ಮುಖ್ಯ ರಸ್ತೆ ಬದಿ ಹಳೆಯದಾದ ದೊಡ್ಡ ಬೇವಿನ ಮರ ಸುಮಾರು ಒಂದು ವರ್ಷದಿಂದ ಒಣಗಿ ಶಿಥಿಲಗೊಂಡಿದ್ದು, ಯಾವದೇ ಸಮಯದಲ್ಲಾದರೂ ಮಳೆ, ಗಾಳಿ ಹೊಡೆತಕ್ಕೆ ನೆಲಕ್ಕುರುಳುವ ಸಂಭವ ಇದೆ. ಅಪಾಯ ಒಡ್ಡಿದ ಈ ಬೇವಿನ ಮರವನ್ನು ಕೂಡಲೇ ತೆರವು ಗೊಳಿಸಬೇಕೆಂದು ಜಿಲ್ಲಾ ಕಾರ್ಮಿಕ ಸಂಘಟನೆ ಅಧ್ಯಕ್ಷ ಮಹಾಂತೇಶ ಬಡಿಗೇರ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಂಬಂಧಿಸಿದವರಿಗೆ ಎಷ್ಟು ಮನವಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲ. ಮುಖ್ಯ ರಸ್ತೆ ಪಕ್ಕದಲ್ಲಿರುವ ಹಳೆಯದಾದ ಈ ಬೇವಿನ ಮರ ಸಂಪೂರ್ಣ ಒನಗಿದ್ದರಿಂದ ಮಳೆ, ಗಾಳಿ ರಭಸಕ್ಕೆ ಬೇಕಾದ ಸಮಯದಲ್ಲಿ ಕುಸಿದು ಬೀಳಬಹುದಾಗಿದೆ. ಈ ರಸ್ತೆ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ನಾನಾ ವಾಹನ, ರೈತರ ಚಕ್ಕಡಿ, ದನ-ಕರುಗಳು ಸೇರಿದಂತೆ ಪಾದಚಾರಿಗಳು ಮರದ ಕೆಳಗಡೆ ಸಾಗುವ ವೇಳೆ ನೆಲಕ್ಕುರುಳಿ ಅಪಾಯ ಸಂಭವಿಸಿ ಯಾವುದೆ ಅನಾಹುತವಾಗುವ ಮುನ್ನವೇ ಎಲ್ಲರ ಹಿತದೃಷ್ಟಿಯಿಂದ ಸಂಬಂಧಿಸಿದ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ಮರ ತೆರವುಗೊಳಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಚಿದಂಬರ ಕುರುಬರ, ಕಾಂಗ್ರೆಸ್ ಮುಖಂಡ ರಫಿಕ್ ನದಾಫ್, ರೋಹಿತ ಚಿನ್ನಣ್ಣವರ, ರಾಜು ಕಲ್ಮಠ, ರಾಜು ಮರಮಣ್ಣವರ, ಗೋಪಾಲ ಮಲಕಾಜನವರ, ರಾಘು ಕಾಳಣ್ಣವರ, ಮಹಾಂತೇಶ ತೊರಗಲ್, ಹನಿಫ್ ನದಾಫ್ ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

25/11/2024 08:00 pm

Cinque Terre

600

Cinque Terre

0

ಸಂಬಂಧಿತ ಸುದ್ದಿ