ಬೆಳಗಾವಿ: ಸರ್ಕಾರದ ಸೌಲಭ್ಯ ಇಲ್ಲದೇ ಸ್ವಂತ ಖರ್ಚಿನಲ್ಲಿ ರೈತರು ರಸ್ತೆ ದುರಸ್ತಿ ಮಾಡಿಕೊಂಡಿರುವ ಪ್ರಸಂಗವೊಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಬಳಿ ನಡೆದಿದೆ.
ಮುನವಳ್ಳಿ ಪಟ್ಟಣದ ಬಾಳೆಕುಂದರಗಿ ಕಾಲುವೆ ಪಕ್ಕದಲ್ಲಿರುವ ರಸ್ತೆಯನ್ನು ರೈತರು ಖುದ್ದು ದುರಸ್ತಿ ಮಾಡಿಕೊಂಡಿದ್ದಾರೆ. ರಸ್ತೆ ದುರಸ್ತಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕಳೆದ ಹಲವು ಬಾರಿ ಮನವಿ ಸಲ್ಲಿಸಿದ್ದ ರೈತರಿಗೆ ಯಾರು ಕ್ಯಾರೆ ಎಂದಿಲ್ಲ. ಯಾವುದೇ ಅನುದಾನ ಇಲ್ಲವೆಂದು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಮತ್ತೊಂದೆಡೆ ಜಮೀನಿನಲ್ಲಿ ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲು ರೈತರು ನಿತ್ಯ ನರಕ ಅನುಭವಿಸವಿಸುವ ಪರಿಸ್ಥಿತಿ ಇದೆ. ಸರ್ಕಾರ ಅನುದಾನ ಬಿಡುಗಡೆ ಮಾಡದಿರುವ ಹಿನ್ನೆಲೆ ಸ್ವಂತ ಖರ್ಚಿನಲ್ಲಿ ರೈತರು ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ. ಹಾಗಾಗಿ ಸರ್ಕಾರದ ಸೌಲಭ್ಯ ಸಿಗದೇ ವಂಚಿತ ಗ್ರಾಮಕ್ಕೆ ಇನ್ನಾದರೂ ಕಾಯಕಲ್ಪ ಬೇಕಾಗಿದೆ.
PublicNext
24/11/2024 02:28 pm