ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮರಸಿದ್ದೇಶ್ವರ ಸ್ವಾಮೀಜಿಗೆ ಧಾರವಾಡ ಕವಿವಿಯಿಂದ ಪಿಎಚ್‌ಡಿ

ಧಾರವಾಡ : ಬೆಳಗಾವಿ ಜಿಲ್ಲೆಯ ಅಂಕಲಗಿ-ಕುಂದರಗಿಯ ಶ್ರೀ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಅಮರಸಿದ್ದೇಶ್ವರ ಸ್ವಾಮೀಜಿ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ.

ಮೂಲತಃ ರಾಯಚೂರಿನ ಸಿರವಾರದ ಶ್ರೀಗಳು, ದಶೋಪನಿಷತ್ತು ಮತ್ತು ದಶಶರಣರ ದೃಷ್ಟಿಯಲ್ಲಿ ಈಶ್ವರ ಸ್ವರೂಪ ಎಂಬ ವಿಷಯ ಕುರಿತು ಮಹಾಪ್ರಬಂಧವನ್ನು ಕವಿವಿಯ ಸಂಸ್ಕೃತ ಅಧ್ಯಯನ ಪೀಠಕ್ಕೆ ಸಲ್ಲಿಸಿದ್ದರು. ಈ ಮಹಾಪ್ರಬಂಧ ಪುರಸ್ಕೃರಿಸಿ ಕವಿವಿಯು, ಈಗ ಅಮರಸಿದ್ದೇಶ್ವರ ಶ್ರೀಗಳಿಗೆ ಪಿಎಚ್‌ಡಿ ಪದವಿ ಘೋಷಿಸಿದೆ.

ಶ್ರೀಗಳಿಗೆ ಕರ್ನಾಟಕ ಕಲಾ ಮಹಾವಿದ್ಯಾಲಯ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಜನಿ ಎಚ್ ಅವರು ಮಾರ್ಗದರ್ಶಕರಾಗಿದ್ದರು. ಶಿವಯೋಗ ಮಂದಿರದಲ್ಲಿ ಪ್ರಾಥಮಿಕ ಶಿಕ್ಷಣ, ಕಮತಗಿಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಸುತ್ತೂರು ಮಠದಲ್ಲಿ ಪಿಯುಸಿ ಪೂರೈಸಿರುವ ಶ್ರೀಗಳು, ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ ಮತ್ತು ಸಂಸ್ಕೃತ ವಿಷಯದಲ್ಲಿ ಎಂಎ ಪದವಿ ಪೂರೈಸಿದ್ದಾರೆ. ಖ್ಯಾತ ವಾಗ್ಮಿಗಳಾಗಿ ತಮ್ಮ ಪ್ರವಚನದ ಮೂಲಕ ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದು, ಇದಲ್ಲದೇ ಶ್ರೀಮಠದಿಂದ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಲ್ಲದೇ ಸಮಾಜಮುಖಿ ಕಾರ್ಯಗಳಿಂದ ಹೆಸರು ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

22/11/2024 10:39 am

Cinque Terre

12.78 K

Cinque Terre

0

ಸಂಬಂಧಿತ ಸುದ್ದಿ