ಧಾರವಾಡ: ಸರ್ಕಾರಿ ನೌಕರರು ಎಷ್ಟೇ ಕೆಲಸ ಮಾಡಿದರೂ ಕೆಲವರ ಅಪೇಕ್ಷೆಯೇ ಬೇರೆಯಾಗಿರುತ್ತದೆ. ಆದರೂ ನಾವು ಅವರ ನಿರೀಕ್ಷೆಯಂತೆಯೇ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಾಯಿ ಕಥೆಯೊಂದನ್ನು ಹೇಳುವ ಮೂಲಕ ಸರ್ಕಾರಿ ನೌಕರರಿಗೆ ನೀತಿಯ ಪಾಠ ಹೇಳಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಉಪಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ನಾಯಿ ಎಷ್ಟೇ ನಿಯತ್ತಿನಿಂದ ಕೆಲಸ ಮಾಡಿದರೂ ಒಂದು ಸಣ್ಣ ತಪ್ಪು ಮಾಡಿದರೂ ಅದರ ಮಾಲೀಕ ಸಹಿಸುವುದಿಲ್ಲ. ಹಾಗೆ ಅಧಿಕಾರಿಗಳು ಸಹ ನಮ್ಮ ಸಂಬಳಕ್ಕೆ ತಕ್ಕಂತೆ ನಿಯತ್ತಿನಿಂದ ಕೆಲಸ ಮಾಡುತ್ತೇವೆ. ನಾವೂ ಕೂಡ ಮಾಲೀಕರ ನಿರೀಕ್ಷೆಯಂತೆ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ನಾಯಿ ಕಥೆಯೊಂದನ್ನು ಹೇಳುವ ಮೂಲಕ ವಿವರಿಸಿದರು.
ನಾವು ಜನ ಸಾಮಾನ್ಯರ ವಿಚಾರಗಳು ಏನಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಜನಪರ ಸ್ಕೀಮ್‌ಗಳನ್ನು ಹೇಗೆ ಜಾರಿ ಮಾಡಬೇಕು ಎಂಬುದನ್ನು ಕಲಿಯಬೇಕು. ನಮಗೆ ದೊಡ್ಡ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಸರ್ಕಾರದ ಸ್ಕೀಮ್‌ಗಳು ಜನ ಸಾಮಾನ್ಯರಿಗೆ ಮುಟ್ಟುವಂತೆ ನಾವು ಕೆಲಸ ಮಾಡಬೇಕು. ಸರ್ಕಾರ ನಮಗೂ ಅನೇಕ ಸವಲತ್ತು ಕೊಟ್ಟಿದೆ. ಅದರ ಮೂಲಕ ಜನಸಮಾನ್ಯರ ಪರವಾಗಿ ನಾವು ಕೆಲಸ ಮಾಡಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/11/2024 09:57 pm