ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರೆಸ್ಟ್ ವಾರೆಂಟ್​ ಜಾರಿ ಬೆನ್ನಲ್ಲೇ 'ಅದಾನಿ ಗ್ರೂಪ್‌' ಷೇರುಗಳಲ್ಲಿ 20% ಕುಸಿತ!

ನವದೆಹಲಿ : US ಪ್ರಾಸಿಕ್ಯೂಟರ್ಗಳು ಗೌತಮ್ ಅದಾನಿ ಮತ್ತು ಇತರರ ವಿರುದ್ಧ 250 ಮಿಲಿಯನ್ ಡಾಲರ್ ಲಂಚ ಮತ್ತು ವಂಚನೆ ಆರೋಪಿಸಿದ ಬೆನ್ನಲ್ಲೆ ಅದಾನಿ ಗ್ರೂಪ್ ತನ್ನ 600 ಮಿಲಿಯನ್ ಡಾಲರ್ ಬಾಂಡ್ ಒಪ್ಪಂದವನ್ನು ಕೈಬಿಟ್ಟಿದೆ. ಇದಲ್ಲದೆ ಅದಾನಿ ಗ್ರೂಪ್‌ನ ಷೇರುಗಳಲ್ಲಿ 20% ದಷ್ಟು ಕುಸಿದಿದೆ. ಅಲ್ಲದೇ ಅದಾನಿ ಗ್ರೀನ್ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ನಲ್ಲಿ 18% ದಷ್ಟು ಕುಸಿತ ಕಂಡು ಬಂದಿದೆ.

ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ (DOJ) ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC) ಅದಾನಿ ಮತ್ತು ಇತರರ ವಿರುದ್ಧ ಲಂಚ ಮತ್ತು ವಂಚನೆ ಆರೋಪಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಭಾರತದ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಲಾಭವನ್ನು ನಿರೀಕ್ಷಿಸುವ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚವನ್ನು ನೀಡಿದ ಮತ್ತು ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಇವರ ಮೇಲಿದೆ.

ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ, ಅದಾನಿ ಎಂಟರ್ಪ್ರೈಸಸ್ ತನ್ನ ಷೇರು ಮೌಲ್ಯದಲ್ಲಿ 20% ತೀವ್ರ ಕುಸಿತವನ್ನು ಕಂಡಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ ಕೂಡ ಕುಸಿತವನ್ನು ಎದುರಿಸಿದೆ. ಅದಾನಿ ಗ್ರೀನ್ ಎನರ್ಜಿ 19.17%, ಅದಾನಿ ಟೋಟಲ್ ಗ್ಯಾಸ್ 18.14%, ಅದಾನಿ ಪವರ್ 17.79%, ಮತ್ತು ಅದಾನಿ ಪೋರ್ಟ್ಸ್ ನಲ್ಲಿ 15% ದಷ್ಟು ಕುಸಿತ ಕಂಡಿದೆ. ಹೆಚ್ಚುವರಿಯಾಗಿ, ಅಂಬುಜಾ ಸಿಮೆಂಟ್ಸ್ 14.99% ರಷ್ಟು ಗಮನಾರ್ಹ ಕುಸಿತವನ್ನು ದಾಖಲಿಸಿದೆ.

ಇಂದು ಬೆಳಿಗ್ಗೆ ಅದಾನಿ ಗ್ರೂಪ್ ಷೇರುಗಳಲ್ಲಿ 20% ಕುಸಿತದ ನಂತರ, ಎಲ್ಲಾ 11 ಅದಾನಿ ಸ್ಟಾಕ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿತ ಎದುರಿಸಿದೆ.

Edited By : Abhishek Kamoji
PublicNext

PublicNext

21/11/2024 01:29 pm

Cinque Terre

67.48 K

Cinque Terre

9

ಸಂಬಂಧಿತ ಸುದ್ದಿ