ಜಗತ್ತಿನಲ್ಲಿ ಭಾರತವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಆಸ್ಕರ್ ವಿಜೇತರಲ್ಲಿ ಒಬ್ಬರು ಏ.ಆರ್ ರೆಹಮಾನ್. ಇವರು ಕೇವಲ ಸಂಗೀತ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಹಿಂದೂವಿನಿಂದ ಇಸ್ಲಾಂಗೆ ಮತಾಂತರಗೊಂಡಿರುವುದು ಇಂದಿಗೂ ಚರ್ಚೆಯಲ್ಲಿರುವ ವಿಷಯ.
ದಿಲೀಪ್ ಕುಮಾರ್, ರೆಹಮಾನ್ ಅವರ ಮೊದಲಿನ ಹೆಸರು ಇವರ ತಂದೆ ಆರ್.ಕೆ ಶೇಖರ್ ಕೂಡ ಸಂಗೀತ ಸಂಯೋಜಕರು.ತಂದೆಯ ಮರಣದ ನಂತರ ಹಾಗೂ ಮೊದಲ ಪ್ರಾಜೆಕ್ಟ್ ರೋಜಾ ಬಿಡುಗಡೆಯ ವೇಳೆ ಇಡೀ ಕುಟುಂಬವೇ ಇಸ್ಲಾಂ ಗೆ ಮತಾಂತರಗೊಂಡಿದ್ದಾರೆ.ರೆಹಮಾನ್ ತಾಯಿ ಕರೀಮಾ ಬೇಗಂ ಪ್ರಾಜೆಕ್ಟ್ ಗಳಲ್ಲಿ ರೆಹಮಾನ್ ಎಂದು ಹೆಸರು ಬದಲಾಯಿಸುವಂತೆ ಒತ್ತಡ ಹಾಕುತ್ತಿದ್ದರಂತೆ.
ಅಂದ ಹಾಗೆ ಇಡೀ ಕುಟುಂಬ ಇಸ್ಲಾಂ ಸೇರ್ಪಡೆಗೊಳ್ಳಲು ಕಾರಣ ಎನು ಗೊತ್ತಾ? ಇದು ವೈಯಕ್ತಿಕ ಮತ್ತು ಆಧ್ಯಾತ್ಮಿಕ ಅನುಭವದಿಂದ ಹುಟ್ಟಿಕೊಂಡಿರುವ ನಿರ್ಧಾರವಂತೆ,ತಂದೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಸೂಫಿ ಆಧ್ಯಾತ್ಮಿಕ ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದು ಅದರಿಂದ ಇಡೀ ಕುಟುಂಬವೇ ಮತಾಂತರಗೊಂಡಿದೆ.
ರೆಹಮಾನ್ ಯಾರ ಮೇಲೂ ಧರ್ಮದ ಪ್ರಭಾವವನ್ನು ಬೀರಲು ಇಷ್ಟ ಪಡದ ವ್ಯಕ್ತಿಯಾಗಿದ್ದು,ಮಕ್ಕಳು ಕುಟುಂಬದ ಇತಿಹಾಸ ತಿಳಿದುಕೊಳ್ಳುವುದಕ್ಕಿಂತ ಹೆಚ್ಚು ಅರ್ಥಶಾಸ್ತ್ರ ಅಥವಾ ವಿಜ್ಞಾನವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದರು. ಮಗಳೂ ಖತೀಜ ಕಾರ್ಯಕ್ರಮವೊಂದರಲ್ಲಿ ತಂದೆಯೊಂದಿಗೆ ಬುರ್ಖಾ ಹಾಕಿ ಕಾಣಿಸಿಕೊಂಡಿದ್ದು ಟೀಕೆಗೆ ಗುರಿಯಾಗಿದ್ದಳು ಅದಕ್ಕೆ ಸಮಜಾಯಿಸಿ ಕೊಟ್ಟ ರೆಹಮಾನ್ ಗಂಡಸರು ಬುರ್ಖಾ ಹಾಕುವುದಿಲ್ಲ,ಇಲ್ಲ ಅಂದ್ರೆ ನಾನು ಒಂದು ಕೊಂಡುಕೊಂಡು ಹಾಕುತ್ತಿದ್ದೆ ಎಂದಿದ್ದರು.
PublicNext
20/11/2024 08:23 pm