ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಏಕಾಂಗಿಯಾಗಿ ಸುರಂಗ ಕೊರೆದು ಬರಡು ಭೂಮಿಯನ್ನು ಹಸಿರಾಗಿಸಿದ ಜಾನ್ ಮೊಂತೆರೋ

ಮಂಗಳೂರು: ನೀರಿಗೆ ಎದುರಾದ ತೊಂದರೆಯಿಂದ ಪಾರಾಗಲು ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ನಿವಾಸಿ ಜಾನ್ ಮೊಂತೆರೋ ಎಂಬವರು ಏಕಾಂಗಿಯಾಗಿ ಸುರಂಗ ಕೊರೆದು ಬರಡು ಭೂಮಿಯನ್ನು ಹಸಿರಾಗಿದ್ದಾರೆ.

ಕೃಷಿ ಕಾಯಕವನ್ನೇ ಉಸಿರಾಗಿಸಿಕೊಂಡ ಕರ್ಮಯೋಗಿ. ಆದರೆ ಇವರಿಗೆ ಕೃಷಿ ಹಾಗೂ ದೈನಂದಿನ ಬಳಕೆಗೆ ನೀರಿನ ಸಮಸ್ಯೆ ಎದುರಾಯ್ತು. ಆಗ ಕಂಡುಕೊಂಡ ಮಾರ್ಗವೇ ಸುರಂಗ ಕೊರೆಯುವುದು. ಮುಪ್ಪಿನ ವಯಸ್ಸಿನಲ್ಲೂ ಅವರು ಏಕಾಂಗಿಯಾಗಿ ಯಾರ ಸಹಾಯವೂ ಇಲ್ಲದೆ ಸುರಂಗ ಕೊರೆದು ಭೂಮಿ ತಾಯಿಯ ಮಡಿಲು ಹಸಿರಾಗಿಸಿದ್ದಾರೆ. ದಿನವಿಡಿ ಕೂಲಿ ಕೆಲಸ ಮಾಡಿ ಮನೆಗೆ ಬಂದ ಬಳಿಕ ಸಂಜೆ 6 ಗಂಟೆಯಿಂದ ತಡರಾತ್ರಿ 12 ಗಂಟೆಯವರೆಗೂ ತನ್ನ ಜಮೀನಿನಲ್ಲಿ ಸುರಂಗ ಕೊರೆಯುತ್ತಿದ್ದರಂತೆ ಇವರು.

ಸುಮಾರು 30 ಫೀಟ್‌ಗೂ ಅಧಿಕ ಸುರಂಗ ಕೊರೆದರೂ ನೀರಿನ ಒರತೆಯಿಲ್ಲ. ಆದರೂ ಧೃತಿಗೆಡದೆ ಸುರಂಗ ಕೊರೆಯುತ್ತಾರೆ‌. ಜಾನ್ ಮೊಂತೆರೋ ಈವರೆಗೆ ಒಟ್ಟು 8 ಸುರಂಗಗಳನ್ನು ಕೊರೆದಿದ್ದು, ಮೂರು ಸುರಂಗಗಳಲ್ಲಿ ನೀರು ಸಿಕ್ಕಿದೆ.

Edited By : Suman K
PublicNext

PublicNext

21/11/2024 12:27 pm

Cinque Terre

22.83 K

Cinque Terre

0

ಸಂಬಂಧಿತ ಸುದ್ದಿ