ಬ್ರಿಟೀಷ್ ಐಶಾರಾಮಿ ಕಾರು ಜಾಗ್ವಾರ್ ತನ್ನ ಹೊಸ ಲೋಗೋವನ್ನು ಮಂಗಳವಾರ ಅನಾವರಣಗೊಳಿಸಿದೆ.ಪಾಪ್ ಆರ್ಟ್-ಪ್ರೇರಿತ ರೀಬ್ರಾಂಡ್ ವೀಡಿಯೊದಲ್ಲಿ ಲೋಗೋ ರಿಲೀಸ್ ಮಾಡಲಾಗಿದೆ. 102 ವರ್ಷಗಳ ಹಿಂದೆ ಸ್ಥಾಪಿಸಲಾದ ಈ ಕಂಪೆನಿಯ ಹಲವು ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಹೊರತರಲಿದ್ದು ಇದು ಜಾಗ್ವಾರ್ ಗೆ ಒಂದು ರೀತಿಯ ʼಹೊಸ ಯುಗʼ ಆರಂಭವಾದಂತೆ. ಹೊಸ ಲೋಗೋ ವೀಡಿಯೋದಲ್ಲಿ ವಿಚಿತ್ರ ವಿಚಿತ್ರವಾಗಿ ಕಲರ್ ಕಲರ್ ಆಗಿ ಕಾಣುವ ಉಡುಪು ಹಾಕಿಕೊಂಡು ಬರುವ ಮಾಡೆಲ್ ಗಳು ಸ್ಕ್ರೀನ್ ಮೇಲೆ ಬಂದು ಹೋಗ್ತಾರೆ, ʼಕಾಪಿ ನಥಿಂಗ್ʼ JaGUar ಎಂಬ ಹೆಸರು ಅನಾವರಣಗೊಳ್ಳುತ್ತದೆ. ಅಕ್ಷರಗಳು ಲೋಗೋ ಆಗಿ ಬದಲಾಗಿದೆ.ಈ ಅಕ್ಷರಗಳು ಚಿನ್ನದ ಕಸ್ಟಮ್-ಫಾಂಟ್ ಅಕ್ಷರಗಳನ್ನು ಒಳಗೊಂಡಿದೆ, ಅದು ಜಿ ಮತ್ತು ಯು ಹೊರತುಪಡಿಸಿ ಸಣ್ಣಕ್ಷರದಲ್ಲಿ ಜಾಗ್ವಾರ್ ಎಂದು ಬರೆಯಲಾಗಿದೆ. ಹೆಸರಿನ ಜೊತೆಗೆ, ಕಂಪನಿಯು ಲೀಪರ್ ಎಂದು ಕರೆಯಲ್ಪಡುವ ಕಂಪೆನಿ ಲೋಗೋ ಪುಟಿಯುವ ಸಿಂಹವನ್ನು ಕೂಡ ಮರುವಿನ್ಯಾಸಗೊಳಿಸಲಾಗಿದೆ.
PublicNext
21/11/2024 07:32 pm