ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

100 ರೊಬೊಟಿಕ್ ಮಲ್ಟಿ-ಯುಟಿಲಿಟಿ ಲೆಗ್ಡ್ ಎಕ್ವಿಪ್‌ಮೆಂಟ್ ಅನ್ನು ಶಸ್ತ್ರಾಗಾರಕ್ಕೆ ಸೇರಿಸಿದ ಭಾರತ

ಭಾರತೀಯ ಸೇನೆಯು ತನ್ನ ಸೈನ್ಯದಲ್ಲಿ ರೋಬೋಟಿಕ್ ನಾಯಿಗಳನ್ನು ಸೇರ್ಪಡೆಗೊಳಿಸಿದೆ. ಯುದ್ಧದ ಸನ್ನದ್ದತೆಗಾಗಿ ಸೇನೆಯು ವಿವಿಧ ಭೂಪ್ರದೇಶಗಳಲ್ಲಿ ತಾಲೀಮು ನಡೆಸುತ್ತಿದೆ,ಬ್ಯಾಟಲ್ ಏಕ್ಸ್ ವಿಭಾಗವು ತೀವ್ರವಾದ ತರಬೇತಿಯಲ್ಲಿ ತೊಡಗಿದೆ.ಈ ರೋಬೋಟಿಕ್‌ ನಾಯಿಯನ್ನು ಸಿಮ್ಯುಲೇಟೆಡ್ ಯುದ್ಧಭೂಮಿ ಸನ್ನಿವೇಶಗಳಲ್ಲಿ ಪರೀಕ್ಷಿಸಲಾಗುತ್ತಿದೆ.ವಸ್ತುಗಳನ್ನು ಸಾಗಿಸುವುದು,ವೈರಿಗಳ ವಿರುದ್ಧ ಕಾದಾಡುವ ಸಾಮರ್ಥ್ಯದ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ.ಭಾರತೀಯ ಸೇನೆಯು ಇತ್ತೀಚೆಗೆ 100 ರೊಬೊಟಿಕ್ ಮಲ್ಟಿ-ಯುಟಿಲಿಟಿ ಲೆಗ್ಡ್ ಎಕ್ವಿಪ್‌ಮೆಂಟ್ ಅನ್ನು ತನ್ನ ಶಸ್ತ್ರಾಗಾರಕ್ಕೆ ಸೇರಿಸಿದೆ. ಈ ಸುಧಾರಿತ ರೊಬೊಟಿಕ್ ವ್ಯವಸ್ಥೆಗಳನ್ನು ಎತ್ತರದ ಪ್ರದೇಶಗಳು ಮತ್ತು ಮರುಭೂಮಿಗಳು ಸೇರಿದಂತೆ ಸವಾಲಿನ ಭೂಪ್ರದೇಶಗಳಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ.ಅವುಗಳು ಥರ್ಮಲ್ ಇಮೇಜಿಂಗ್ ಸೆನ್ಸರ್‌ಗಳು, ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್‌ಗಳು ಮತ್ತು 12 ಕಿಲೋಗ್ರಾಂಗಳಷ್ಟು ಪೇಲೋಡ್ ಸಾಮರ್ಥ್ಯಗಳನ್ನು ಹೊಂದಿವೆ. ಇವುಗಳು ಯುದ್ಧಭೂಮಿಯಲ್ಲಿ ಪರಿಸ್ಥಿತಿಯ ಅರಿವು ನೀಡಿ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತವೆಯಂತೆ.

Edited By : Somashekar
PublicNext

PublicNext

23/11/2024 06:58 pm

Cinque Terre

19.55 K

Cinque Terre

0

ಸಂಬಂಧಿತ ಸುದ್ದಿ