ಹಿಮದಿಂದ ಆವೃತವಾದ 15,000 ಅಡಿಗಳಷ್ಟು ಎತ್ತರದ ಪೆರುವಿಯನ್ ಪರ್ವತದಲ್ಲಿ ಏಕಾಂಗಿಯಾಗಿ ಟ್ರಕ್ಕಿಂಗ್ ಹೋದಂತಹ ವ್ಯಕ್ತಿಯೊಬ್ಬ ದಾರಿ ತಪ್ಪಿ ಕಳೆದು ಹೋದಂತಹ ಪ್ರಸಂಗ ನಡೆದಿದೆ.ಮುಂದೆ ಎಲ್ಲಿಗೆ ಹೋಗಬೇಕೆಂದು ತೋಚದ ಆತ ತನ್ನೆಡೆಗೆ ಬರುತ್ತಿರುವ ಬೀದಿನಾಯಿಯನ್ನು ಕಂಡು ಆಶ್ಚರ್ಯ ಪಡುತ್ತಾನೆ. 4,600 ಮೀಟರ್ ಎತ್ತರಕ್ಕೆ ಈ ನಾಯಿ ಹೇಗೆ ಬಂತೆಂದು ನಾಯಿ ಹತ್ತಿರ ಸಂಭಾಷಣೆಗೆ ಇಳಿಯುತ್ತಾನೆ. ನಾನು ನನ್ನ ಮಾರ್ಗದರ್ಶಿಯನ್ನು ಕಳೆದುಕೊಂಡಿದ್ದೇನೆ ಇದೀಗ ಈ ನಾಯಿಯೇ ನನಗೆ ಮಾರ್ಗದರ್ಶಿ ಇನ್ನೊಮ್ಮೆ ದಾರಿ ತಪ್ಪಿದರೆ ಈ ನಾಯಿಯೇ ಕಾರಣವಾಗುತ್ತೆ ಎಂದು ತಮಾಷೆ ಮಾಡುತ್ತಾ ವೀಡಿಯೋ ಮಾಡಿಕೊಂಡು ನಾಯಿಯನ್ನೇ ಫಾಲೋ ಮಾಡ್ತಾನೆ.
ʼಪಂಟಾ ಯೂನಿಯನ್' ಎಂಬ ಸೈನ್‌ಬೋರ್ಡ್ ಹತ್ತಿರ ಬಂದು ಶಿಬಿರವನ್ನು ತಲುಪುತ್ತಾನೆ.ಈತನ ಈ ಜರ್ನಿಯಲ್ಲಿ ಸಹಾಯ ಮಾಡಿದ ಆ ನಾಯಿಗೆ ಕೃತಜ್ಞತೆ ಸಲ್ಲಿಸುತ್ತಾ ತನ್ನ ಪಯಣ ಮುಂದುವರಿಸುತ್ತಾನೆ ಈ ಪಯಣಿಗ.
PublicNext
23/11/2024 07:08 pm