ಕೇರಳದ ಕೋಯಿಕ್ಕೋಡ್ನಲ್ಲಿರುವ ಐಸ್ಕ್ರೀಂ ತಯಾರಿಕಾ ಘಟಕದಲ್ಲಿ ಪ್ಯಾಕಿಂಗ್ ಮಾಡುವ ಮುಂಚೆ ಉದ್ಯೋಗಿಯೊಬ್ಬ ಸ್ಟಿಕ್ ಗಳನ್ನು ನೆಕ್ಕಿ ನಂತರ ಐಸ್ ಕ್ರೀಮ್ ಮೇಲೆ ಅಂಟಿಸುತ್ತಿದ್ದು ಈ ವೀಡಿಯೋ ಎಲ್ಲಡೆ ವೈರಲ್ ಆದ ಬೆನ್ನಲ್ಲೇ ಐಸ್ ಕ್ರೀಮ್ ತಯಾರಿಕಾ ಘಟಕವನ್ನು ಮುಚ್ಚಲಾಗಿದೆ.ಅಂಬಲಪಾರದಲ್ಲಿ ನೆಲೆಗೊಂಡಿರುವ ʼಐಸ್ ಮಿʼ ಹೆಸರಿನ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ.ಐಸ್ ಖರೀದಿಸಲು ಹೋಗಿದ್ದ ಸಜಿತ್ ಎಂಬ ವ್ಯಕ್ತಿ ಕೃತ್ಯವನ್ನು ರೆಕಾರ್ಡ್ ಮಾಡಿ ಆನ್ಲೈನ್ನಲ್ಲಿ ಹಂಚಿಕೊಂಡಿದ್ದಾರೆ.ಕಾರ್ಖಾನೆಯಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಮಲಪ್ಪುರಂ ಪ್ರಾದೇಶಿಕ ವಿಶ್ಲೇಷಣಾತ್ಮಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತನಿಖೆಯ ಭಾಗವಾಗಿ ಕೊಡುವಳ್ಳಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ಕೇರಳದಾದ್ಯಂತ ಹಳೆಯದಾದ ರೆಫ್ರಿಜರೇಟರ್ಗಳನ್ನು ತೆರವುಗೊಳಿಸಿ,ಕಲುಷಿತ ಐಸ್ ಸ್ಟಾಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
PublicNext
23/11/2024 07:58 pm