ಗೋಡೆಗೆ ಟೇಪಿನಿಂದ ಅಂಟಿಸಿದ ಬಾಳೆಹಣ್ಣಿನ ಆರ್ಟ್ ಅನ್ನು ₹ 52.35 ಕೋಟಿ ಗೆ ನ್ಯೂ ಯಾರ್ಕ್ ನಲ್ಲಿ ಹರಾಜು ಮಾಡಿ ಸೇಲ್ ಮಾಡಲಾಗಿದೆ.ಪ್ರಸಿದ್ಧ ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ ಈ ಕಲಾಕೃತಿಯನ್ನು ರಚಿಸಿದ್ದು ಸೋಥೆಬಿ ಹರಾಜಿನಲ್ಲಿ ಮಾರಾಟವಾಗಿ ಜಾಗತಿಕವಾಗಿ ಚರ್ಚೆಯಾಗುತ್ತಿದೆ. ಕಾಮಿಡಿಯನ್ ಎಂಬ ವಿವಾದಾತ್ಮಕ ತುಣುಕು ಕಲೆ ಜಾಗತಿಕ ಸಂಭಾಷಣೆಗಳನ್ನು ಹುಟ್ಟುಹಾಕಿದೆ.2019 ರಲ್ಲಿ ಆರ್ಟ್ ಬಾಸೆಲ್ ಮಿಯಾಮಿ ಬೀಚ್‌ನಲ್ಲಿ ಕಾಮಿಡಿಯನ್ ಶೀರ್ಷಿಕೆಯಲ್ಲಿ ಮೊದಲ ಬಾರಿಗೆ ಕಲಾಕೃತಿ ಪ್ರದರ್ಶಿಸಿ ಮೆಚ್ಚುಗೆ ಮತ್ತು ಟೀಕೆಗಳನ್ನು ಗಳಿಸಿತ್ತು.ಬಾಳೆಹಣ್ಣು ಖರೀದಿ ಮಾಡಿದವರು ಕೇವಲ ಆರ್ಟ್ ಅನ್ನ ಅಷ್ಟೇ ಖರೀದಿ ಮಾಡಿದ್ದಲ್ಲ, ಪ್ರಮಾಣೀಕೃತ ಕಲಾಕೃತಿಯಾಗಿ ಮರುಸೃಷ್ಟಿಸುವ ಅಧಿಕಾರವನ್ನೂ ಹೊಂದಿದ್ದಾರೆ.ಕ್ಯಾಟೆಲನ್, ಗೋಲ್ಡನ್ ಟಾಯ್ಲೆಟ್‌ನಂತಹ ಪ್ರಚೋದನಕಾರಿ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ.
PublicNext
22/11/2024 12:58 pm