ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯ್ಯಪ್ಪ ವ್ರತಧಾರಿ ರಾಮ್‌ ಚರಣ್‌ ದರ್ಗಾ ಭೇಟಿ, ಕ್ಷಮೆ ಯಾಚಿಸುವಂತೆ ಆಸ್ತಿಕರಿಂದ ಒತ್ತಡ

ಆಂಧ್ರಪ್ರದೇಶದ ಕಡಪಾದಲ್ಲಿರುವ ಅಮೀನ್ ಪೀರ್ ದರ್ಗಾಕ್ಕೆ ತೆಲುಗು ನಟ ರಾಮ್‌ ಚರಣ್‌ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ ದರ್ಶನ ನೀಡಿದ್ದು ಇದೀಗ ಬಹಳ ಚರ್ಚೆಗೆ ಕಾರಣವಾಗಿದೆ. ಎಆರ್ ರೆಹಮಾನ್ ಕಳೆದ ವರ್ಷ ಕಡಪಾ ದರ್ಗಾದಲ್ಲಿ 80 ನೇ ರಾಷ್ಟ್ರೀಯ ಮುಷೈರಾ ಗಜಲ್ ಕಾರ್ಯಕ್ರಮಕ್ಕೆ ರಾಮ್‌ ಚರಣ್‌ ಕರೆದುಕೊಂಡು ಬರುವುದಾಗಿ ಹೇಳಿಕೊಂಡಿದ್ದರು,ಅದರಂತೆ ಈ ವರ್ಷ ರಾಮ್‌ ಚರಣ್‌ ದರ್ಗಾಕ್ಕೆ ಕಪ್ಪು ಬಣ್ಣದ ಬಟ್ಟೆ ಧರಿಸಿ ಭೇಟಿ ನೀಡಿದ್ದು ವಿವಾದ ಹುಟ್ಟು ಹಾಕಿದೆ. ನಟ ಕ್ಷಮೆಯಾಚಿಸಬೇಕೆಂದು ಒಂದು ವರ್ಗ ಒತ್ತಡ ಹಾಕುತ್ತಿದೆ.ಇದರ ಮಧ್ಯೆ ಪತ್ನಿ ಉಪಾಸನಾ ಕೊನಿಡೇಲಾ ಎಕ್ಸ್‌ ನಲ್ಲಿ ಗಂಡನ ದರ್ಗಾ ಭೇಟಿಯ ಫೊಟೋ ಶೇರ್‌ ಮಾಡಿ "ನಂಬಿಕೆಯು ಒಂದುಗೂಡಿಸುತ್ತದೆ, ಎಂದಿಗೂ ವಿಭಜಿಸುವುದಿಲ್ಲ, ನಾವು ದೈವಿಕತೆಯ ಎಲ್ಲಾ ಮಾರ್ಗಗಳನ್ನು ಗೌರವಿಸುತ್ತೇವೆ ನಮ್ಮ ಶಕ್ತಿಯು ಏಕತೆಯಲ್ಲಿದೆ. #OneNationOneSpirit #jaihind" ಎಂದು ಬರೆದಿದ್ದಾರೆ.

ಶಿಸ್ತುಬದ್ಧ ಆಧ್ಯಾತ್ಮಿಕ ಸಿದ್ಧಿಯೇ ಅಯ್ಯಪ್ಪ ದೀಕ್ಷೆ,ಸುಮಾರು 41 ದಿನಗಳ ಕಾಲ ಮಾಡುವ ಶಿಸ್ತುಬದ್ಧ ಧಾರ್ಮಿಕ ಆಚರಣೆ ಇದು ಈ ವೇಳೆ ದರ್ಗಾ ಹೋಗಿದ್ದು ಸರಿಯಲ್ಲ ಎಂದು ಉಪಾಸನ ಪೋಸ್ಟ್‌ ಗೆ ಕಮೆಂಟ್ಸ್‌ ಗಳು ಬರುತ್ತಿವೆ. ಈ ವೇಳೆ ಕಡಪಾದಲ್ಲಿರುವ ದುರ್ಗಾದೇವಿ ದೇವಸ್ಥಾನಕ್ಕೂ ತೆರಳಿ ಆಶಿರ್ವಾದ ಪಡೆದಿದ್ದರು ರಾಮ್‌ ಚರಣ್

Edited By : Suman K
PublicNext

PublicNext

21/11/2024 07:24 pm

Cinque Terre

49.34 K

Cinque Terre

7