ದೆಹಲಿಯಲ್ಲಿ ಮಾಲಿನ್ಯ ಮಟ್ಟವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಸರ್ಕಾರವು 50 ರಷ್ಟು ಸರ್ಕಾರಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ನಿರ್ದೇಶಿಸಿದೆ. ಇಂದು ಮಧ್ಯಾಹ್ನ ದೆಹಲಿ ಪರಿಸರ ಸಚಿವರಾದ ಗೋಪಾಲ್ ರೈ ಟ್ವೀಟ್ ಮಾಡಿ ಈ ಮಾಹಿತಿ ಹಂಚಿಕೊಂಡಿದ್ದಾರೆ.ಎಂಸಿಡಿ ಕಚೇರಿಗಳು ಬೆಳಗ್ಗೆ 8:30 ರಿಂದ ಸಂಜೆ 5:00 ರವರೆಗೆ ಕಾರ್ಯನಿರ್ವಹಿಸಲಿದ್ದು, ದೆಹಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 10:00 ರಿಂದ ಸಂಜೆ 6:30 ರವರೆಗೆ ಕಾರ್ಯನಿರ್ವಹಿಸಲಿದೆ.ಈ ಆದೇಶವು ಫೆಬ್ರವರಿ 28, 2025 ರವರೆಗೆ ಜಾರಿಯಲ್ಲಿರುತ್ತದೆ.
AQI ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಸಿಟಿ ಒಳಗೆ ಅಗತ್ಯ ವಸ್ತುಗಳ ಸಾಗಟ ಬಿಟ್ಟು ಉಳಿದಂತೆ ಟ್ರಕ್ ಪ್ರವೇಶ ನಿಷೇಧಿಸಲಾಗಿದೆ,ಅನಿವಾರ್ಯವಲ್ಲದ ಲಘು ವಾಣಿಜ್ಯ ವಾಹನಗಳನ್ನು ನಿಷೇಧಿಸಲಾಗಿದೆ,ಕನ್‌ಸ್ಟ್ರಕ್ಷನ್ ಕೆಲಸ ನಿಷೇಧಿಸಲಾಗಿದೆ.ಈ ಮಧ್ಯೆ ಪರಿಸರ ಸಚಿವರು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಕೃತಕ ಮಳೆಗೆ ಅನುಮೋದನೆಯನ್ನು ಕೋರಿದ್ದಾರೆ.ಗಾಳಿಯ ಗುಣಮಟ್ಟ ಕೆಟ್ಟದಾಗಿ 978 ಕ್ಕೆ ಏರಿದ್ದು ಇದು ಒಬ್ಬ ವ್ಯಕ್ತಿ ದಿನಕ್ಕೆ 49 ಸಿಗರೇಟ್ ಸೇದಿದರೆ ಆತನ ದೇಹಕ್ಕೆ ಆಗುವಷ್ಟು ವಿಷಯುಕ್ತವಾಗಿದೆ.
PublicNext
21/11/2024 11:50 am