ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಸುಮಾರು 68 ಮಹಿಳೆಯರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಪ್ರಸವಪೂರ್ವ ತಪಾಸಣೆ ಮತ್ತು ಕೌನ್ಸೆಲಿಂಗ್‌ನಲ್ಲಿ ಈ ಮಹಿಳೆಯರು ಎಚ್‌ಐವಿ ಪಾಸಿಟಿವ್ ಎಂದು ಪರೀಕ್ಷಿಸಿದ್ದಾರೆ. 68 ಮಹಿಳೆಯರಲ್ಲಿ 20 ಮಹಿಳೆಯರು ತಮ್ಮ ದೇಹದಲ್ಲಿ ಹಚ್ಚೆ ಹಾಕಿಸಿಕೊಂಡ ನಂತರ ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಎಲ್ಲಾ ಮಹಿಳೆಯರು ರಸ್ತೆ ಬದಿಯ ಟ್ಯಾಟೂ ಕಲಾವಿದರಿಂದ ಹಚ್ಚೆ ಹಾಕಿಸಿಕೊಂಡಿದ್ದರು,ಟ್ಯಾಟೂ ಹಾಕಿಸಿಕೊಂಡ ನಂತರ ದೇಹವು ಕ್ಷೀಣಿಸಲು ಆರಂಭವಾಗಿ ಎಚ್ಐವಿ ಲಕ್ಷಣಗಳು ಕಂಡುಬಂದಿದೆ. ಸೂಜಿಯನ್ನು ಹಲವಾರು ಬಾರಿ ಮರುಬಳಕೆ ಮಾಡಿದ್ದರಿಂದ ರೋಗ ಹರಡಿದೆಯಂತೆ.ಎಲ್ಲಾ ಸೋಂಕಿತ ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಆರೈಕೆಯನ್ನು ನೀಡಲಾಗುವುದು ಎಂದು ಆಸ್ಪತ್ರೆಯ ಎಚ್‌ಐವಿ ಸಲಹೆಗಾರ ಉಮಾ ಸಿಂಗ್ ಹೇಳಿದ್ದಾರೆ.
PublicNext
20/11/2024 08:08 pm