ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ಮನೆಯಲ್ಲಿ ಹುಡುಗನ ಸ್ನೇಹಿತನಿಗೆ ಕಾರ್ಡಿಯಾಕ್‌ ಅರೆಸ್ಟ್‌ , ಸ್ಥಳದಲ್ಲೇ ಸಾವು

ಆಂಧ್ರಪ್ರದೇಶದಲ್ಲಿ ತನ್ನ ಸ್ನೇಹಿತನ ಮದುವೆಗೆ ಖುಷಿಯಿಂದ ಹೋದಂತಹ ಯುವಕನೋರ್ವ ಮಸಣ ಸೇರಿದ ಘಟನೆ ನಡೆದಿದೆ. ದಂಪತಿಗೆ ಉಡುಗೊರೆ ನೀಡಿ ಖುಷಿಯಿಂದ ಆತ ಅದನ್ನು ಓಪನ್‌ ಮಾಡುತ್ತ ಇರಬೇಕಾದರೆ ಸೈಡ್‌ ಅಲ್ಲೇ ನಿಂತಿದ್ದ ಯುವಕನಿಗೆ ಕಾರ್ಡಿಯಾಕ್‌ ಅಟ್ಯಾಕ್‌ ಆಗಿದೆ. ಈತ ಅಮೇಝಾನ್‌ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಾರ್ಡಿಯಾಕ್‌ ಅರೆಸ್ಟ್‌ ಸಿಂಟಾಮ್ಸ್‌ ಹೇಗಿರುತ್ತೆ?

೧. ಹಠಾತ್ ತಲೆತಿರುಗುವುದು

೨. ವಾಕರಿಕೆ

೩.ಉಸಿರಾಟದ ತೊಂದರೆ

೪.ಎದೆ ನೋವು ಒತ್ತಡ

೫.ಭುಜ, ತೋಳು, ಬೆನ್ನು, ಕುತ್ತಿಗೆ, ದವಡೆ, ಹಲ್ಲುಗಳು ಅಥವಾ ಕೆಲವೊಮ್ಮೆ ಹೊಟ್ಟೆಯ ಮೇಲ್ಭಾಗಕ್ಕೆ ಹರಡುವ ನೋವು ಅಥವಾ ಅಸ್ವಸ್ಥತೆ

೬. ಬೆವರು, ಆಯಾಸ

೭.ಎದೆಯುರಿ ಅಥವಾ ಅಜೀರ್ಣ

ಈ ರೀತಿ ಆದಾಗ ತಕ್ಷಣ ಆಸ್ಪತ್ರೆ ದಾಖಲಿಸಿ,CPR ಅನ್ನು ಕೂಡಲೇ ಪ್ರಾರಂಭಿಸಬೇಕು. ಜಾಗೃತೆ ನಿಮ್ಮ ಆರೋಗ್ಯ ನಿಮ್ಮ ಕೈ ಯಲ್ಲಿ ಇದೆ ಅತಿಯಾದ ಚಿಂತೆ, ಅನಾರೋಗ್ಯಕರ ಲೈಫ್‌ ಸ್ಟೈಲ್‌ ಇವೆಲ್ಲವುಗಳು ಈ ರೀತಿಯ ಸಮಸ್ಯೆ ತಂದೊಡ್ಡುತ್ತದೆ.

Edited By : Suman K
PublicNext

PublicNext

23/11/2024 06:32 pm

Cinque Terre

13.9 K

Cinque Terre

0

ಸಂಬಂಧಿತ ಸುದ್ದಿ