ನಟಿ ಕೀರ್ತಿ ಸುರೇಶ್ ಅವರು ತನ್ನ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕಳೆದ 15 ವರ್ಷಗಳಿಂದ ಉದ್ಯಮಿ ಆಂಟೋನಿ ತಟ್ಟಿಲ್ ಮತ್ತು ನಟಿ ಕೀರ್ತಿರವರ ಸ್ಕೂಲ್ ಫ್ರೆಂಡ್ ಆಗಿದ್ದು, ರೀಲೆಶನ್ಶೀಪ್ನಲ್ಲಿ ಇದ್ದರಂತೆ. ಇದೀಗ ಎರಡು ಕುಟುಂಬದ ಒಪ್ಪಿಗೆಯ ಮೇರೆಗೆ ಇದೇ ಡಿ.11 ಮತ್ತು 12 ರಂದು ಗೋವಾದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆಯಂತೆ.
ಈ ಮದುವೆಯ ಕುರಿತು ನಟಿಯ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯದಲ್ಲೇ ಮದುವೆ ಬಗ್ಗೆ ಅವರು ಘೋಷಿಸಲಿದ್ದಾರೆ ಎನ್ನಲಾಗಿದೆ. ಇದೀಗ ಹುಡುಗನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಸುದ್ದಿ ಕೇಳಿ ನಟಿ ಕೀರ್ತಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ
PublicNext
20/11/2024 03:40 pm