ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ 5.8 ಕೋಟಿ ಪಡಿತರ ಚೀಟಿ ರದ್ದು: ಕೇಂದ್ರ ಆಹಾರ ಸಚಿವಾಲಯ

ನವದೆಹಲಿ : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ಧತಿ ವಿಚಾರದಿಂದ ದೊಡ್ಡ ಗೊಂದಲ ಸೃಷ್ಟಿಯಾಗಿದೆ. ಸರ್ಕಾರಕ್ಕೆ ಕೆಲವರು ಹಿಡಿಶಾಪ ಹಾಕ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಇತರೆ ಭಾಗದಲ್ಲೂ ಪಡಿತರ ಚೀಟಿ ರದ್ದಾಗಿರುವ ಮಾಹಿತಿ ದೊರೆತಿದೆ.

ದೇಶದೆಲ್ಲೆಡೆ ಸಾರ್ವಜನಿಕ ಪಡಿತರ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿದ್ದು, 5.8 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯವು ತಿಳಿಸಿದೆ.

ಒಟ್ಟು 80.6 ಕೋಟಿ ಪಡಿತರ ಚೀಟಿಗಳನ್ನು ವಿತರಿಸಲಾಗಿತ್ತು. ಆಧಾ‌ರ್ ಸಂಖ್ಯೆ ಆಧರಿತ ದೃಢೀಕರಣ ಹಾಗೂ ಇ- ಕೆವೈಸಿ ಪರಿಶೀಲನೆ ಪ್ರಕ್ರಿಯೆ ಮೂಲಕ ಈ ನಕಲಿ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ಪಡಿತರ ವಿತರಣೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲಾಗಿದೆ. ಜೊತೆಗೆ, ಅರ್ಹರಿಗೆ ಪಡಿತರ ಸಿಗಲು ನೆರವಾಗಿದೆ ಎಂದು ಹೇಳಿದೆ.

ಇಲ್ಲಿಯವರೆಗೆ 20.4 ಕೋಟಿ ಪಡಿತರ ಚೀಟಿಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸಚಿವಾಲಯ ವಿವರಿಸಿದೆ.

ಪ್ರಸ್ತುತ ದೇಶದಲ್ಲಿ ಶೇ 98ರಷ್ಟು ಪಡಿತರ ವಿತರಣೆಯು ಆಧಾರ್ ದೃಢೀಕರಣದ ಮೂಲಕ ನಡೆಯುತ್ತಿದೆ. ಅನರ್ಹರಿಗೆ ಆಹಾರ ಧಾನ್ಯಗಳ ವಿತರಣೆ ಹಾಗೂ ಪಡಿತರ ಕಳ್ಳತನಕ್ಕೂ ತಡೆ ಬಿದ್ದಿದೆ ಎಂದು ಹೇಳಿದೆ.

ದೇಶದಲ್ಲಿ ಪಡಿತರ ಪೂರೈಕೆ ವ್ಯವಸ್ಥೆಯ ಬಲವರ್ಧನೆಗೆ ಭಾರತೀಯ ಆಹಾರ ನಿಗಮವು ಕ್ರಮಕೈಗೊಂಡಿದೆ. ಪೂರೈಕೆ ಸರಪಳಿಯ ಸದೃಢಕ್ಕೆ ಮುಂದಾಗಿದೆ. ಆಹಾರ ಪೂರೈಸುವ ವಾಹನಗಳ ಮೇಲೆ ನಿಗಾ ಇಟ್ಟಿದೆ. ಸಕಾಲದಲ್ಲಿ ರೈಲುಗಳ ಮೂಲಕ ನಿಗದಿತ ಸ್ಥಳಗಳಿಗೆ ಆಹಾರ ಧಾನ್ಯಗಳ ರವಾನೆಗೂ ಕ್ರಮ ವಹಿಸಿದೆ ಎಂದು ಸಚಿವಾಲಯ ಮಾಹಿತಿ ಕೊಟ್ಟಿದೆ.

Edited By :
PublicNext

PublicNext

21/11/2024 01:29 pm

Cinque Terre

13.51 K

Cinque Terre

1

ಸಂಬಂಧಿತ ಸುದ್ದಿ