ಕುಂದಗೋಳ : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್ ಖರೀದಿ ಪ್ರಕ್ರಿಯೆ ಅರ್ಜಿ ಸಲ್ಲಿಕೆಗೆ ನವೆಂಬರ್ 30ರ ವರೆಗೆ ಕಾಲಾವಕಾಶ ಸಿಗುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಸೋಯಾಬಿನ್ ಖರೀದಿ ಪ್ರಕ್ರಿಯೆ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆ ಬಹುತೇಕ ಕಾಡಿದ ಹಿನ್ನೆಲೆಯಲ್ಲಿ ರೈತರು ಅರ್ಜಿ ಪ್ರಕ್ರಿಯೆ ವಿಸ್ತರಿಸಲು ಸರ್ಕಾರಕ್ಕೆ ಕೋರಿದ್ದರು.
ಇನ್ನೂ ಕುಂದಗೋಳದಲ್ಲಿ ಎರಡು ಹಂತದಲ್ಲಿ ಖರೀದಿ ಪ್ರಕ್ರಿಯೆ ನಡೆದಿದ್ದು, ಸೆಪ್ಟೆಂಬರ್ 5 ರಿಂದ 83 ಅರ್ಜಿ, ನವೆಂಬರ್ 19ರ ಒಳಗಾಗಿ 97 ಅರ್ಜಿ ಸಲ್ಲಿಕೆಯಾಗಿವೆ. ಈಗಾಗಲೇ ಖರೀದಿ ಪ್ರಕ್ರಿಯೆ ಸಹ ಆರಂಭಗೊಂಡಿದ್ದು 12% ತೇವಾಂಶ ಇರುವ ಸೋಯಾಬಿನ್ ಬೆಳೆಯ 50 ಕೆಜಿಯ 1016 ಚೀಲಗಳು ಖರೀದಿಯಾಗಿವೆ.
ಮುಖ್ಯವಾಗಿ 4892 ರೂಪಾಯಿ ಕ್ವಿಂಟಾಲ್ ಸೋಯಾಬಿನ್ ಬೆಳೆಗೆ ಬೆಲೆ ನಿಗದಿ ಮಾಡಿರುವುದು ರೈತರಲ್ಲೂ ಖುಷಿ ತಂದಿದ್ದು, ಸದ್ಯ ಸೋಯಾಬಿನ್ ಖರೀದಿ ಪ್ರಕ್ರಿಯೆ ಅರ್ಜಿಗೆ ನವೆಂಬರ್ 30ರ ವರೆಗೆ ಕಾಲಾವಕಾಶ ಸಿಕ್ಕಲ್ಲಿ ರೈತರಿಗೆ ವರದಾನ ಆಗಲಿದೆ.
Kshetra Samachara
21/11/2024 07:54 am