ಕುಂದಗೋಳ : ಅತಿವೃಷ್ಟಿ ಕರಿ ಛಾಯೆಗೆ ಸಿಲುಕಿ ಮುಂಗಾರು ಬೆಳೆಯನ್ನು ಕಳೆದುಕೊಂಡ ರೈತಾಪಿ ಜನತೆ ಈ ಬಾರಿ ಹಿಂಗಾರು ಬೆಳೆ ಮೇಲೆ ಭರವಸೆ ಇಟ್ಟಿದ್ದಾರೆ.
ಹೌದು ! ಅತಿವೃಷ್ಟಿ ಸಂಕಷ್ಟಕ್ಕೆ ಮುಂಗಾರು ಬೆಳೆ ನೀರಿನಲ್ಲಿ ಹೋಮವಾಗಿದ್ದು, ಪ್ರಸ್ತುತ ಹಿಂಗಾರು ಕಡಲೆ, ಗೋಧಿ, ಕುಸುಬೆ, ಜೋಳ ಬಿತ್ತನೆ ಕಾರ್ಯ ಕುಂದಗೋಳ ತಾಲೂಕಿನ ಎಲ್ಲೇಡೆ ಭರದಿಂದ ಸಾಗಿದ್ದು ಶೇ.75% ಬಿತ್ತನೆ ಕಾರ್ಯ ಸಹ ಮುಗಿದಿದೆ.
ನವೆಂಬರ್ 20ರ ಕೃಷಿ ಇಲಾಖೆ ವರದಿ ಅನುಸಾರ ಕುಂದಗೋಳ ತಾಲೂಕಿನಾದ್ಯಂತ 18800 ಹೇಕ್ಟರ್ ಕಡಲೆ, 1800 ಹೇಕ್ಟರ್ ಗೋಧಿ, 4520 ಹೇಕ್ಟರ್ ಜೋಳ, 800 ಹೇಕ್ಟರ್ ಕುಸುಬಿ ಪ್ರದೇಶ ಬಿತ್ತನೆಯಾಗಿದೆ.
ಮುಖ್ಯವಾಗಿ ಆರಂಭದಲ್ಲಿ ಬಿತ್ತಿದ ಹಿಂಗಾರು ಕಡಲೆ ಅಕ್ಟೋಬರ್ ತಿಂಗಳು ಸುರಿದ ಮಳೆಗೆ ಬೀಜ ಕೊಚ್ಚಿ ಹೋದ ಪರಿಣಾಮ ಈ ಬಾರಿ ರೈತಾಪಿ ಜನತೆ ಎರಡೆರಡು ಬಾರಿ ಬಿತ್ತನೆ ಕಾರ್ಯಕ್ಕೆ ಅಣಿಯಾಗಿ 2000 ಕ್ವಿಂಟಾಲ್ ಹೆಚ್ಚಿನ ಬೀಜ ಬಿತ್ತನೆಯಾಗಿದೆ.
ಪ್ರಸ್ತುತ ವರ್ಷ ಹಿಂಗಾರು ಬೆಳೆಯಲ್ಲಿ ಕಡಲೆ ಈ ಬಾರಿ ಪ್ರಮುಖ ಪಾತ್ರ ವಹಿಸಿದ್ದು, ಬಿತ್ತನೆ ಕ್ಷೇತ್ರದಲ್ಲೂ ಹೆಚ್ಚಳವಾಗಿದೆ. ಸದ್ಯ ವರುಣನ ಆರ್ಭಟಕ್ಕೆ ಸಿಲುಕಿ ಮುಂಗಾರು ಕಳೆದುಕೊಂಡ ರೈತನಿಗೆ ಹಿಂಗಾರು ಬೆಳೆ ವರವಾಗಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
21/11/2024 06:42 pm