ಕುಂದಗೋಳ : ಪ್ರಸ್ತುತ ವರ್ಷ ಅತಿವೃಷ್ಟಿಗೆ ಸಿಲುಕಿ ಕುಂದಗೋಳ ತಾಲೂಕಿನಲ್ಲಿ 1880 ಹೇಕ್ಟರ್ ತೋಟಗಾರಿಕೆ ಬೆಳೆ ಬೆಳೆ ಹಾಳಾದ ಬಗ್ಗೆ ಅಧಿಕಾರಿಗಳು ವರದಿ ತಯಾರಿಸಿ ರೈತರಿಂದ ಆಕ್ಷೇಪಣೆ ಸಲ್ಲಿಸಲು ನವೆಂಬರ್ 10ರ ವರೆಗೆ ಕಾಲಾವಕಾಶ ನೀಡಿದ್ದರು.
ಪ್ರಸ್ತುತ ತೋಟಗಾರಿಕೆ ಒಣ ಮೆಣಸಿನಕಾಯಿ, ಈರುಳ್ಳಿ, ತರಕಾರಿ ವಿವಿಧ ಬೆಳೆ ಬೆಳೆದ ರೈತರಿಂದ 285 ಆಕ್ಷೇಪಣೆ ಅರ್ಜಿ ತೋಟಗಾರಿಕೆ ಇಲಾಖೆಗೆ ಸಲ್ಲಿಕೆಯಾಗಿದ್ದು ಪರಿಶೀಲನೆ ಕಾರ್ಯ ನಡೆಯಬೇಕಿದೆ.
ಆರಂಭದಲ್ಲಿ ಒಳ್ಳೆಯ ಫಲದ ನಿರೀಕ್ಷೆ ಭರವಸೆ ನೀಡಿದ್ದ ಒಣ ಮೆಣಸಿನಕಾಯಿ, ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ನೆಲಕಚ್ಚಿದ ಪರಿಣಾಮ ಸ್ವತಃ ರೈತರೇ ತಾವೇ ಬೆಳೆದ ಬೆಳೆ ಕಿತ್ತು ಎಸೆದಿದ್ದರು.
ಇದೀಗ ಅಧಿಕಾರಿಗಳು ನೀಡಿದ ಬೆಳೆ ಹಾನಿ ಪ್ರಮಾಣ 1880 ಹೇಕ್ಟರ್ ಮೀರಿವೆ ಎಂದು 285 ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿದ್ದು, ಪರಿಶೀಲನೆ ವರದಿ ಏನು ಬರುತ್ತೋ ಕಾದು ನೋಡಬೇಕಿದೆ.
ಒಟ್ಟಿನಲ್ಲಿ ರೈತಾಪಿ ಜನ ತಮ್ಮ ಬೆಳೆ ಹಾನಿ ಪ್ರದೇಶ ಬಗ್ಗೆ ಆಕ್ಷೇಪಣೆ ಸಲ್ಲಿಸಿ 9 ದಿನ ಗತಿಸಿದ್ದು, ಅಂತಿಮ ಬೆಳೆ ಹಾನಿ ವರದಿಯತ್ತ ರೈತರ ದೃಷ್ಟಿ ನೆಟ್ಟಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
19/11/2024 06:25 pm