ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಚಾಲಕರು, ಸವಾರರು ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸುವುದರಿಂದ ಅಪಘಾತ ಸಂಭವಿಸಿ ತಮ್ಮ ಹಾಗೂ ಬೇರೆಯವರ ಜೀವಕ್ಕೆ ಕಂಟಕ ತರುತ್ತಿದ್ದಾರೆ. ಈ ಹಿನ್ನೆಲೆ ಅಂತಹ ಚಾಲಕರು, ಸವಾರರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಪೊಲೀಸರು ಶನಿವಾರ ರಾತ್ರಿ ನಗರದ ವಿವಿಧ ಪ್ರದೇಶಗಳಲ್ಲಿ ಮಾಡಿದ್ದಾರೆ.
ಮೊದಲೇ ಅವಳಿ ನಗರದಲ್ಲಿ ರಸ್ತೆಗಳು ಸರಿಯಿಲ್ಲ. ಇಂತಹ ರಸ್ತೆಯಲ್ಲಿ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅಂತಹದರಲ್ಲಿ ಕೆಲವು ಸವಾರರು, ಚಾಲಕರು ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಿ ತಾವು ಅಪಘಾತ ಮಾಡಿಕೊಂಡು ಬೇರೆಯವರ ಜೀವದ ಜೊತೆ ಆಟವನ್ನು ಆಡುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಜಾಗೃತಿ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕಮಿಷನರೇಟ್ ವತಿಯಿಂದ ಮಾಡಲಾಯಿತು.
ನಗರದ ಮೂರು ಕಡೆಗಳಲ್ಲಿ ಸಂಚಾರ ವಿಭಾಗದ ಡಿಸಿಪಿ ರವೀಶ್, ಎಸಿಪಿ ವಿನೋದ್ ಹಾಗೂ ಮೂರು ಟ್ರಾಫಿಕ್ ಇನ್ಸ್‌ಪೆಕ್ಟರ್‌ಗಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ಬೈಕ್ ಸವಾರರಿಗೆ 1500 ರೂಪಾಯಿ ದಂಡ, ಕಾರು, ಆಟೋ ಚಾಲಕರಿಗೆ 3000 ರೂಪಾಯಿ ದಂಡವನ್ನು ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಮಿಷನರ್ ಎನ್ ಶಶಿಕುಮಾರ್ ಪೆಟ್ರೋಲಿಂಗ್ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದ ಸವಾರನನ್ನು ಚೇಸ್ ಮಾಡಿ ಹಿಡಿದು 1500 ರೂಪಾಯಿ ದಂಡದ ಜೊತೆಗೆ ಬೈಕ್ ಸೀಜ್ ಮಾಡಿದ್ದಾರೆ.
ಅವಳಿ ನಗರದಲ್ಲಿ ಅಪಘಾತಗಳನ್ನು ತಪ್ಪಿಸಲು ಹಾಗೂ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗ್ರತಿ ಮೂಡಿಸಲು ಸ್ಪೆಷಲ್ ಡ್ರೈವ್'ಅನ್ನು ಕಮಿಷನರೇಟ್ ವತಿಯಿಂದ ನಿರಂತರವಾಗಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೆ ಹೋದ್ರೆ ನಿಮ್ಮ ಜೇಬಿಗೂ ದಂಡದ ಕತ್ರಿ ಬಿದ್ದರು ಬೀಳಬಹುದಾಗಿದೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
Kshetra Samachara
24/11/2024 11:36 am