ಹುಬ್ಬಳ್ಳಿ: ಆತ ಕಳ್ಳತನದ ಆರೋಪದ ಮೇಲೆ ಜೈಲು ಪಾಲಾಗಿದ್ದ. ಬೈಕ್ ಮೆಕ್ಯಾನಿಕ್ ಜೈಲಿನಿಂದ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ, ಮೆಕ್ಯಾನಿಕ್ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಹೀಗಾಗಿ ಆತನ ಪತ್ನಿಯು ನನ್ನ ಗಂಡನ ಸಾವಿಗೆ ಕಿರುಕುಳವೇ ಕಾರಣ ಅಂತಾ ಆರೋಪ ಮಾಡಿ ಹಿರಿಯ ಅಧಿಕಾರಿಗಳಿಗೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ. ಅಷ್ಟಕ್ಕೂ ಇದೇನಿದು ಮೆಕ್ಯಾನಿಕ್ ಹಾಗೂ ಪೊಲೀಸರ ಕಥೆ ಅಂತೀರಾ ಈ ಸ್ಟೋರಿ ನೋಡಿ.
ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈತನ ಹೆಸರು ಮಹಾಂತೇಶ. ಹುಬ್ಬಳ್ಳಿಯ ಆನಂದ ನಗರದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿದ್ದ ಈತ ತನ್ನ ಹೆಂಡತಿ ಹಾಗೂ ಮಕ್ಕಳ ಜೊತೆ ವಾಸವಿದ್ದ. ಒಂದು ತಿಂಗಳ ಹಿಂದೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಮಹಾಂತೇಶ್ ಕಳುವಾದ ಬೈಕ್ ಮೇಲೆ ಓಡಾಡಿರೋ ದ್ರಶ್ಯಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗ ಆರೋಪಿ ಬಳಿಯಿಂದ ಅವಳಿ ನಗರ ಸೇರಿದಂತೆ ಬೇರೆ ಜಿಲ್ಲೆಯಲ್ಲಿ ಕಳ್ಳತನವಾಗಿದ್ದ 12 ಬೈಕ್ ಹಾಗೂ 110000 ರೂಪಾಯಿ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನ ಮಾಡಿದ್ದರು.
ಈ ಘಟನೆಯಿಂದ ಮಹಾಂತೇಶ್ ಸಂಬಂಧಿಕರು ಹಾಗೂ ಮನೆಯ ಸುತ್ತಮುತ್ತಲ ಜನರು ಮಹಾಂತೇಶ್ ಬೈಕ್ ಕಳ್ಳತನ ಮಾಡಿದ್ದಾನೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆ ಮಹಾಂತೇಶ ಮಾನಸಿಕವಾಗಿ ನೊಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನವೂ ತನ್ನ ಹೆಂಡತಿಯಾದ ಪೂಜಾಳ ಮುಂದೆ ನಾನು ತಪ್ಪನ್ನು ಮಾಡಿಲ್ಲ. ಕೆಲವು ಪೊಲೀಸರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಒಪ್ಪಿಸಿದ್ದಾರೆ ಅಂತಾ ಹೇಳಿದ್ದನಂತೆ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು ನನ್ನ ಗಂಡನ ಸಾವಿಗೆ ನ್ಯಾಯವನ್ನು ಕೊಡಿಸಬೇಕು ಅಂತಾ ಪೂಜಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾಳೆ.
ಪೂಜಾ ನೀಡಿದ ಮನವಿಯನ್ನು ಸ್ವೀಕಾರ ಮಾಡಿದ ಡಿಸಿಪಿ ರವೀಶ ಅವರು ಘಟನೆಯ ಮಾಹಿತಿ ಕುರಿತು ಸಮಗ್ರ ತನಿಖೆಯನ್ನು ನಡೆಸುತ್ತೇವೆ. ಒಂದು ವೇಳೆ ಇಲಾಖೆಯ ಸಿಬ್ಬಂದಿ ತಪ್ಪು ಮಾಡಿದ್ದರೆ ಅವರ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ನಿಮಗೆ ನ್ಯಾಯವನ್ನು ಕೊಡಿಸುತ್ತೇನೆ ಅಂತಾ ಹೇಳಿದ್ದಾರೆ. ಒಟ್ಟಿನಲ್ಲಿ ಅವಳಿ ನಗರದ ಖಡಕ್ ಕಮಿಷನರ್ ಎಂದು ಹೆಸರುವಾಸಿಯಾಗಿರುವ ಎನ್. ಶಶಿಕುಮಾರ್, ತಪ್ಪು ಎಸಗಿದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಅಂತಾ ಮೃತ ಮಹಾಂತೇಶನ ಹೆಂಡತಿ ಪೂಜಾ ಹೇಳಿದ್ದಾಳೆ.
-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
Kshetra Samachara
23/11/2024 05:45 pm