ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ರಸ್ತೆ ಬದಿಯಲ್ಲಿ ಓಡಾಡುವ ಮಹಿಳೆಯರಿಗೆ ರೋಡ್ ರೋಮಿಯೋ ಗಳ ಕಾಟದ ಬಗ್ಗೆ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ ಜೊತೆ ಬೈಕ್ ನಲ್ಲಿ ಪೆಟ್ರೋಲಿಂಗ್ ಮಾಡಿ ರೋಡ್ ರೋಮಿಯೋಗಳಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದರು.
ಹುಬ್ಬಳ್ಳಿಯ ದಾಜೀಬಾನ್ ಮೂಲಕ ಸಿಬ್ಬಂದಿ ಜೊತೆ ಬೈಕ್ ಪೆಟ್ರೋಲಿಂಗ್ ಶುರು ಮಾಡಿದ ಕಮಿಷನರ್ ಶಶಿಕುಮಾರ್, ಬ್ರಾಡ್ ವೇ, ಷಾ ಬಜಾರ್, ಸ್ಟೇಶನ್ ರೋಡ್, ಕೇಶ್ವಾಪುರ, ಗೋಪನಕೊಪ್ಪ, ಉಣಕಲ್ ಹಾಗೂ ವಿದ್ಯಾನಗರದಲ್ಲಿ ಪೆಟ್ರೋಲಿಂಗ್ ಮಾಡಿ ರಸ್ತೆ ಬದಿಯಲ್ಲಿ ಅನಾವಶ್ಯಕವಾಗಿ ನಿಂತಿದ್ದ ರೋಡ್ ರೋಮಿಯೋಗಳ ಬೈಕ್ ಹಾಗೂ ಮೊಬೈಲ್ ಸೀಝ್ ಮಾಡಿ ಬಿಸಿ ಮುಟ್ಟಿಸುವ ಕಾರ್ಯವನ್ನು ಕಮಿಷನರ್ ಎನ್. ಶಶಿಕುಮಾರ್ ಹಾಗೂ ಅಪರಾಧ ವಿಭಾಗದ ಡಿಸಿಪಿ ರವೀಶ್ ಮಾಡಿದರು.
ಕೆಲವು ದಿನಗಳ ಹಿಂದೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ನಲ್ಲಿ ಬಂದಿದ್ದ ಕೆಲವು ರೋಡ್ ರೋಮಿಯೋಗಳು ಬಾಲಕಿಗೆ ಕಿರುಕುಳ ಕೊಟ್ಟಿದ್ದರು. ಆ ರೋಡ್ ರೋಮಿಯೋಗಳನ್ನು ಕಂಬಿ ಹಿಂದೆ ತಳ್ಳುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಿತ್ತು. ಹೀಗಾಗಿ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಹಾಗೂ ಪುಂಡ ಪೋಕರಿಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ನೈಟ್ ಪೆಟ್ರೋಲಿಂಗ್ ಹಮ್ಮಿಕೊಳ್ಳಲಾಗಿದೆ ಅಂತಾ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
ಒಟ್ಟಿನಲ್ಲಿ ಕಮಿಷನರ್ ಎನ್. ಶಶಿಕುಮಾರ್ ಅವರು ಮಹಿಳೆಯರ ಹಿತದೃಷ್ಟಿಯಿಂದ ಮಹಿಳೆಯರು ಧೈರ್ಯವಾಗಿ ಓಡಾಡಬೇಕು. ಮಹಿಳೆಯರ ಸಂರಕ್ಷಣೆ ನಮ್ಮ ಧ್ಯೇಯ ಎಂಬ ಉದ್ದೇಶದಿಂದ ಈ ರೀತಿಯ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ಕೆ ಅವಳಿ ನಗರದ ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ವಿನಯ ರೆಡ್ಡಿ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/11/2024 10:39 pm