ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಳಿ ಸಂಜೆ ವೇಳೆ ಸದ್ದು ಮಾಡಿದ ಪೊಲೀಸರ ಗನ್ - ನಟೋರಿಯಸ್ ದರೊಡೆಕೋರರ ಕಾಲಿಗೆ ಮೂರು ಗುಂಡು

ಹುಬ್ಬಳ್ಳಿ: ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಉದ್ಯಮಿಯನ್ನು ಬೆದರಿಸಿ ಹಣ ದರೋಡೆ ಮಾಡಿದ್ದ ಪ್ರಕರಣವನ್ನು ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಂತರ ಪಂಚನಾಮೆ ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ದರೊಡೆಕೋರರ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಭರತ್, ಹಾಗೂ ಫಾರೂಕ್ ಎಂಬಾತರೇ ಗುಂಡೇಟು ತಿಂದ ನಟೋರಿಯಸ್ ದರೊಡೆಕೋರರು. ಕಳೆದ ಅಕ್ಟೋಬರ್ 24ರಂದು ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೇ ಸ್ಟೇಶನ್ ಬಳಿಯ ಬೋಗಿ ರೆಸ್ಟೋರೆಂಟ್ ಬಳಿ ಹಣ ಸಾಗಾಟ ಮಾಡುತ್ತಿದ್ದ ಉದ್ಯಮಿಯ ಬಳಿ ದರೋಡೆ ಮಾಡಿದ್ದ ಈ ಗ್ಯಾಂಗ್ ಅಲ್ಲಿಂದ ಪರಾರಿಯಾಗಿತ್ತು.

ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ನಂತರ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಸಿಸಿಬಿ ಪೊಲೀಸರು ಮಂಗಳೂರು ಮೂಲದ ದರೊಡೆಕೋರರನ್ನು ಬಂಧಿಸಿ ಮಾಡಿ ಗಬ್ಬೂರು ಬಳಿ ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಆಗ ಪೊಲೀಸರ ಮೇಲೆ ನಟೋರಿಯಸ್ ದರೋಡೆಕೋರರು ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಎಚ್ಚೆತ್ತ PSI ಸ್ವಾತಿ ಹಾಗೂ ಇನ್ಸ್‌ಪೆಕ್ಟರ್ ಮಾರುತಿ ಆತ್ಮರಕ್ಷಣೆಗಾಗಿ ಆರೋಪಿಗಳಾದ ಭರತ್ ಹಾಗೂ ಫಾರೂಕ್ ಮೇಲೆ ಫೈರಿಂಗ್ ಮಾಡಿದ್ದಾರೆ ಅಂತಾ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಸದ್ಯ ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಖಾಕಿ ಪಡೆ ಈ ಗ್ಯಾಂಗ್‌ನಲ್ಲಿ ಇನ್ನು ಹಲವು ನಟೋರಿಯಸ್ ದರೋಡೆಕೋರರು ಭಾಗಿಯಾಗಿರುವ ಮಾಹಿತಿಯನ್ನು ಕಲೆ ಹಾಕಿದೆ. ಬೇರೆ ಬೇರೆ ರಾಜ್ಯಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಜಾಲವ ಬಿಸಿದ್ದಾರೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/11/2024 09:29 pm

Cinque Terre

87.45 K

Cinque Terre

17

ಸಂಬಂಧಿತ ಸುದ್ದಿ