ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಓಸಿ ಅಂಕಿ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿ ಅಂದರ್ ! ನಗದು ವಶ

ಕುಂದಗೋಳ : ಓಸಿ ಅಂಕಿ ಸಂಖ್ಯೆ ಬರೆಯಿಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿ ಬಂಧಿತನಿಂದ 830 ರೂಪಾಯಿ ನಗದು ಹಣ ಓಸಿ ಸಂಖ್ಯೆ ಬರೆಯಿಸಿಕೊಳ್ಳುತ್ತಿದ್ದ ಚೀಟಿ ವಶಕ್ಕೆ ಪಡೆದಿದ್ದಾರೆ.

ಹೌದು ! ನವೆಂಬರ್ 21 ರಂದು ಬುಧವಾರ ಕುಂದಗೋಳ ಕಡಪಟ್ಟಿ ರಸ್ತೆ ಮಾರ್ಗದ ನೀರಿನ ಟ್ಯಾಂಕ್ ಬಳಿ ನಿಂತು ಓಸಿ ಅಂಕಿ ಸಂಖ್ಯೆ ಬರೆಯಿಸಿಕೊಳ್ಳುತ್ತಿದ್ದ ಇನಾಮಕೊಪ್ಪ ಗ್ರಾಮದ ಬಸವರಾಜ ಹಣುಮಂತಪ್ಪ ಮಾದರ ಎಂಬಾತನನ್ನು ಬಂಧಿಸಿದ್ದಾರೆ.

ಈ ಪ್ರಕರಣದ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Edited By : Nagaraj Tulugeri
Kshetra Samachara

Kshetra Samachara

23/11/2024 01:31 pm

Cinque Terre

33.84 K

Cinque Terre

0

ಸಂಬಂಧಿತ ಸುದ್ದಿ