ಕುಂದಗೋಳ : ರೈತಾಪಿ ಜನರ ಬೆಳೆ ಹಾನಿ ಅಂತಿಮ ವರದಿ ಸಿದ್ಧಪಡಿಸಲು ನವೆಂಬರ್ 10ರ ವರೆಗೆ ಆಕ್ಷೇಪಣೆಗೆ ಅವಕಾಶ ನೀಡಿದ್ದ ಕೃಷಿ ಇಲಾಖೆಗೆ 1434 ಆಕ್ಷೇಪಣೆ ಅರ್ಜಿ ಸಲ್ಲಿಕೆ ಆಗಿದ್ದು, 939 ಹೆಕ್ಟೇರ್ ಹಾನಿ ಕ್ಷೇತ್ರ ಹೆಚ್ಚಾಗುವ ಸಾಧ್ಯತೆ ಇದೆ.
ಕುಂದಗೋಳ ತಾಲೂಕಿನ ಎಲ್ಲೆಡೆ ಪ್ರಸ್ತುತ ವರ್ಷ ಸುರಿದ ಧಾರಾಕಾರ ಮಳೆಗೆ ಅಕ್ಷರಶಃ ರೈತಾಪಿ ಬೆಳೆಗಳು ಹಾನಿಯಾಗಿದ್ದವು.
ಈ ವೇಳೆ ಬೆಳೆ ಹಾನಿ ವರದಿ ಕಲೆ ಹಾಕಿದ ಸಹಾಯಕ ಕೃಷಿ ನಿರ್ದೇಶಕರು, 15900 ಹೆಕ್ಟೇರ್ ಬೆಳೆ ಹಾನಿ ಘೋಷಿಸಿ ಅಂತಿಮವಾಗಿ ನವೆಂಬರ್ 10ರ ವರೆಗೆ ಆಕ್ಷೇಪಣೆ ಕೋರಿದ್ದರು. ಪ್ರಸ್ತುತ ಇಲ್ಲಿಯವರೆಗೆ 1434 ಆಕ್ಷೇಪಣೆ ಅರ್ಜಿ ಬಂದಿವೆ.
ಇನ್ನೂ ಆಕ್ಷೇಪಣೆ ಗಡುವು ಮುಗಿದು ಇಂದಿಗೆ 10 ದಿನ ಗತಿಸಿವೆ. ಸದ್ಯ ಹಾನಿ ವರದಿ ಪರಿಶೀಲಿಸಿ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಂಡಲ್ಲಿ ರೈತಾಪಿ ಜನರಿಗೆ ಕೊಂಚ ಪರಿಹಾರ ಹಣ ದೊರೆಯಲಿದೆ. ಸದ್ಯ ರೈತಾಪಿ ಜನತೆ ಅತಿವೃಷ್ಟಿ ಸಂಕಷ್ಟದಲ್ಲಿ ಸಿಲುಕಿದ್ದು ಪರಿಹಾರ ವಿತರಣೆ ಕಾರ್ಯ ಶೀಘ್ರವೇ ಆಗಬೇಕಿದೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/11/2024 06:22 pm