ಹಿರಿಯೂರು : ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹಿರಿಯೂರು ನಗರದ ಹುಳಿಯಾರು ರಸ್ತೆಯನ್ನು ತ್ವರಿತವಾಗಿ ಅಗಲೀಕರಣ ಮಾಡುವಂತೆ ಒತ್ತಾಯಿಸಿ ನಗರಸಭೆಯನ್ನು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಮಹಾನಾಯಕ ದಲಿತ ಸೇನೆ (ರಿ).ಭಾರತೀಯ ದಲಿತ ಸಂಘರ್ಷ ಸಮಿತಿ (ರಿ).ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ,ಕರ್ನಾಟಕ ರಾಜ್ಯ ರೈತ ಸಂಘ,ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ, ಬಿ.ಕೃಷ್ಣಪ್ಪ ಬಣ ),ಕರ್ನಾಟಕ ನವ ನಿರ್ಮಾಣ ಸೇನೆ (ರಿ), ಕರ್ನಾಟಕ ರಾಜ್ಯ ರೈತ ಸಂಘ -ಹಸಿರುಸೇನೆ, ದಲಿತ ಸ್ವಾಭಿಮಾನಿ ಸಮಿತಿ (ರಿ),ಅಂಬೇಡ್ಕರ್ ಸ್ವಾಭಿಮಾನಿ ಸೇನೆ,ಮುಂತಾದ ಪ್ರಗತಿಪರ ಸಂಘಟನೆಯ ಹೋರಾಟಗಾರರು ಭಾಗವಹಿಸಿದ್ದರು,ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳು ಮತ್ತು ನಗರಸಭೆ ಅಧ್ಯಕ್ಷ ಅಜ್ಜಪ್ಪನವರು ಶೀಘ್ರದಲ್ಲೇ ರೆಡ್ಡಿ ಹೋಟೆಲ್ ನಿಂದ ಗಾಂಧಿ ಸರ್ಕಲ್ ವರೆಗೂ ಇರುವ ಕಟ್ಟಡಗಳನ್ನು ತೆರವುಗೊಳಿಸಲಾಗುವುದೆಂದು ತಿಳಿಸಿದರು.
Kshetra Samachara
21/11/2024 09:10 am