ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಬಡವರ ಬಾದಾಮಿ ಶೇಂಗಾ ಬೆಲೆ ಕುಸಿತ, ನಷ್ಟದಲ್ಲಿ ರೈತರು - ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆಯುವಂತೆ ರೈತರ ಆಗ್ರಹ

ಮೊಳಕಾಲ್ಮುರು: ಬಯಲು ಸೀಮೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶೇಂಗಾ ಕಟಾವು ಬಹುತೇಕ ಮುಗಿದಿದೆ.

ತಾಲೂಕಿನಲ್ಲಿ ಈ ವರ್ಷ 22,000 ಹೆಕ್ಟರ್ ಭೂ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು, ಆರಂಭದಲ್ಲಿ ಮಳೆಯ ಕೊರತೆಯಾಗಿತ್ತು ಆದರೆ ನಂತರ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದರಿಂದ ತೇವಾಂಶ ಹೆಚ್ಚಾಗಿ ಬುಡುಸು ರೋಗ ಬಂದು ಇಳುವರಿ ಕಮ್ಮಿಯಾಗಿದೆ.

ದೀಪಾವಳಿ ಹಬ್ಬದ ನಂತರ ಶೇಂಗಾ ಕಟಾವು ಆರಂಭಗೊಂಡಿದ್ದು, ಕಟಾವು ಕೆಲಸ ಬಹುತೇಕ ಮುಗಿದಿದೆ, ಆದರೆ ಕಾಯಿ ಬಿಡಿಸಲು ಕೂಲಿಕಾರ್ಮಿಕರ ಕೊರತೆ ಕಾಣುತ್ತಿದೆ, ಕಾರ್ಮಿಕರು ಪ್ರತಿನಿತ್ಯ ಕೂಲಿ ಹಣ ಕೊಡಲು ಶೇಂಗಾ ಬೆಳೆಗಾರರು ಪರದಾಡುವಂತಹ ಆಗಿದೆ.

ಹೀಗಾಗಿ ಸಮಯದ ಉಳಿತಾಯ ಮತ್ತು ಕೂಲಿ ಕಾರ್ಮಿಕರು ಸಿಗದ ಕಾರಣದಿಂದ ರೈತರು ಕಾಯಿ ಬಿಡಿಸುವ ಯಂತ್ರಕ್ಕೆ ಮೊರೆ ಹೋಗಿದ್ದಾರೆ. ಪ್ರತಿ ಒಂದು ಗಂಟೆಗೆ 1200 ರೂಪಾಯಿಯಂತೆ ಕಾಯಿ ಬಿಡಿಸುವ ಯಂತ್ರಕ್ಕೆ ದರ ನಿಗದಿಯಾಗಿದ್ದು ತಾಲೂಕಿನ ಬಹುತೇಕ ರೈತರು ಈ ಯಂತ್ರಕ್ಕೆ ಮೊರೆ ಹೋಗಿದ್ದಾರೆ.

ಕೂಲಿ ಕಾರ್ಮಿಕರಿಗೆ ಕಾಯಿ ಬಿಡಿಸಲು ಪ್ರತಿ ಡಬ್ಬಕ್ಕೆ ₹ 30ರಿಂದ ₹ 40 ನೀಡಬೇಕಿದೆ. ಈ ಮೂಲಕ ಪ್ರತಿ ಕ್ವಿಂಟಲ್ ಕಾಯಿ ಬಿಡಿಸಲು ₹ 700ರಿಂದ ₹ 800 ಕೊಡಬೇಕಿದೆ. ಇಷ್ಟು ವೆಚ್ಚ ಮಾಡಿ ಮಾರುಕಟ್ಟೆಗೆ ಹೋದರೆ ಶೇಂಗಾದ ದರ ಕುಸಿತವಾಗಿದೆ. ₹ 110ರಿಂದ ₹ 120 ಪ್ರತಿ ಕೆಜಿಯಂತೆ ಕೊಂಡು ಬಿತ್ತನೆ ಮಾಡಿರುವ ರೈತರಿಗೆ ಆರಂಭದ ಬಿತ್ತನೆಯಿಂದ ಹಿಡಿದು ಕಾಯಿ ಬಿಡಿಸುವವರೆಗೂ ಹೆಚ್ಚು ಖರ್ಚು ಆಗುತ್ತದೆ, ಈಗಿರುವ ಮಾರುಕಟ್ಟೆ ದರ ಪ್ರತಿ ಕ್ವಿಂಟಲ್ ಗೆ ₹3500ರಿಂದ ₹5000ವರೆಗೂ ಮಾರಾಟವಾಗುತ್ತದೆ ಇದರಿಂದಾಗಿ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.

ಕೇಂದ್ರ ಸರ್ಕಾರ ಶೇಂಗಾಕ್ಕೆ 6700ರೂ ನಂತೆ ಬೆಂಬಲ ಘೋಷಣೆ ಮಾಡಿದೆ, ಆದ್ರೆ ಇಲ್ಲಿಯವರೆಗೆ ಖರೀದಿ ಕೇಂದ್ರಗಳನ್ನು ತೆರೆದಿಲ್ಲ,ಆದ್ದರಿಂದ ಈ ಕೂಡಲೇ ಮೊಳಕಾಲ್ಮುರು ಮತ್ತು ಚಳ್ಳಕೆರೆ ಭಾಗದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Edited By : Ashok M
PublicNext

PublicNext

03/12/2024 08:44 am

Cinque Terre

16.27 K

Cinque Terre

0

ಸಂಬಂಧಿತ ಸುದ್ದಿ