ಚಳ್ಳಕೆರೆ : ತಾಲ್ಲೂಕಿನ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಚನ್ನಮ್ಮನಾಗತಿಹಳ್ಳಿ ಗ್ರಾಮದ ಶ್ರೀಪಾತಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮಂಡಳಿ ಮುಂದಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಮಲ್ಲಯ್ಯ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ದೇವಸ್ಥಾನ ಕಮಿಟಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕಳೆದ ನೂರಾರು ವರ್ಷಗಳಿಂದ ಪುರಾತನ ಇತಿಹಾಸ ಹೊಂದಿರುವ ದೇವಾಲಯಕ್ಕೆ ಮರು ನಿರ್ಮಾಣದ ಅಗತ್ಯತೆ ಇದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಅತಿ ಹೆಚ್ಚಿನ ಮಳೆಯಿಂದ ದೇವಸ್ಥಾನ ಅಪಾಯದ ಹಂಚಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಐತಿಹಾಸಿಕ ದೇವಾಲಯ ಇಲ್ಲವಾಗುತ್ತದೆ. ಪುರಾತನ ಕಾಲದಿಂದಲ್ಲೂ ಪೂಜಿಸುತ್ತಾ ಬಂದಿರುವ ಶ್ರೀಪಾತಲಿಂಗೇಶ್ವರ ದೇವಸ್ಥಾನ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ದೇವಾಲಯಕ್ಕೆ ಮರುಪೂರ್ಣ ನಿರ್ಮಾಣ ಅಗತ್ಯವಿದೆ. ಎಂದು ತಿಳಿಸಿದ್ದರು .
Kshetra Samachara
03/12/2024 01:28 pm