ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಗ್ರಾಹಕರಿಗೆ ಸೈಬರ್‌ ಕಳ್ಳರಿಂದ ಭದ್ರತೆ ಒದಗಿಸುವುದು ನಮ್ಮ ಗುರಿ- ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ

ಶಿವಮೊಗ್ಗ : ಗ್ರಾಹಕರಿಗೆ ಹೆಚ್ಚಿನ ಸುಲಲಿತ ಮತ್ತು ವೇಗದ ಸೇವೆ ಕಲ್ಪಿಸಲು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‍ನ ಮೊದಲನೇ ಮಹಡಿಯಲ್ಲಿ ನೂತನ ನವೀಕೃತ ಕಾರ್ಪೊರೇಟ್ ಕಚೇರಿಯನ್ನು ಆರಂಭಿಸಿದ್ದು, ಇಂದು ಉದ್ಘಾಟನೆ ನೆರವೇರಿಸಲಾಗಿದೆ.

ಈ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕಾರ್ಪೋರೇಟ್ ಆಡಳಿತ ಮಾದರಿಯಲ್ಲಿ ಸಿಬ್ಬಂದಿಗಳು ಹೊಸ ವಾತಾವರಣದಲ್ಲಿ ಕೋ ಆಪರೇಟಿವ್ ಸೊಸೈಟಿಯಲ್ಲೂ ಕೂಡ ಉತ್ತಮ ಸೇವೆ ನೀಡಲಿ ಎಂಬ ಉದ್ದೇಶದಿಂದ ಸಹಕಾರಿ ಸಪ್ತಾಹದ ಕೊನೆ ದಿನವಾದ ಇಂದು ಈ ಸುಸಜ್ಜಿತ ಕಚೇರಿ ಲೋಕಾರ್ಪಣೆ ಮಾಡಲಾಗಿದೆ ಎಂದಿದ್ದಾರೆ.

ಡಿಸಿಸಿ ಬ್ಯಾಂಕ್ ನಲ್ಲಿ 3 ಲಕ್ಷ ಗ್ರಾಹಕರಿದ್ದು, ಅವರ ದಾಖಲೆಗಳು ಸುರಕ್ಷಿತವಾಗಿ ಇರಬೇಕು ಎನ್ನುವ ದೃಷ್ಟಿಯಿಂದ ಮಾದರಿಯಾಗಿ ಅತ್ಯಂತ ಭದ್ರತೆ ಇರುವ ಕಚೇರಿ ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರಿ ವ್ಯವಸ್ಥೆ ಮುಂಚೂಣಿಗೆ ಬರಲು ಇದು ಸಹಕಾರಿಯಾಗುತ್ತದೆ. ಮುಂದಿನ ಎರಡು ವರ್ಷದಲ್ಲಿ ಡಿಸಿಸಿ ಬ್ಯಾಂಕ್ ಗೆ 75 ವರ್ಷ ತುಂಬಲಿದ್ದು, ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ರಾಜ್ಯದಲ್ಲೇ ಮಾದರಿಯಾಗಿ ಹಮ್ಮಿಕೊಂಡಿದ್ದೇವೆ.

ಸೈಬರ್ ಕ್ರೈಂಗಳು ಜಾಸ್ತಿಯಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ಸುಭದ್ರ ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿಯಾಗಿದೆ. ಡಿಸಿಸಿ ಬ್ಯಾಂಕ್ ನಿಂದ ಎಲ್ಲಾ ಆನ್‍ಲೈನ್ ಸೇವೆಗಳು ಪ್ರಾರಂಭವಾಗಿದ್ದು, ಫೋನ್ ಪೇ ಕೂಡ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ನೇರವಾಗಿ ನಬಾರ್ಡ್‍ಗೆ ಲಿಂಕ್ ಕಲ್ಪಿಸುವ ಸಾಫ್ಟ್ ವೇರ್ ಕೂಡ ಅಳವಡಿಸಲಾಗುವುದು. ಇದೊಂದು ಮಾದರಿ ವ್ಯವಸ್ಥೆ ಆಗಲಿದೆ. ಠೇವಣಿದಾರರಿಗೆ ಭದ್ರತೆ ಕೊಡುವ ಕಾಯ್ದೆಯನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Edited By : Ashok M
PublicNext

PublicNext

20/11/2024 04:11 pm

Cinque Terre

28.87 K

Cinque Terre

0

ಸಂಬಂಧಿತ ಸುದ್ದಿ