ನವಲಗುಂದ : ತಾಲೂಕು ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ನಮ್ಮ ತಾಲೂಕಿಗೆ ಹೆಸರು ತರಬೇಕು ಎಂದು ಶಾಸಕ ಎನ್.ಎಚ್.ಕೋನರೆಡ್ಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಸಮೀಪದ ಖನ್ನೂರ ಗ್ರಾಮದ ಆರ್‌ವಿಎಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ 10 ವಲಯಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 100ಕ್ಕೂ ಹೆಚ್ಚು ನಿರ್ಣಾಯಕರು ಪಾಲ್ಗೊಂಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಸಂಸ್ಥೆಯ ಅಧ್ಯಕ್ಷ ಸುರೇಶ ಅಂಗಡಿ, ಬಿಆರ್‌ಪಿ ಆರ್.ಬಿ. ಮುರನಾಳ, ಎನ್.ವೈ. ಬೀಡಿ, ಎಸ್. ಎಂ. ಬೆಂಚಿಕೇರಿ, ವೈ.ಎಚ್. ಬಣವಿ, ಎನ್.ವಿ. ಕುರವತ್ತಿಮಠ, ವಿ.ಎಂ. ಹಿರೇಮಠ, ಆರ್.ಎಚ್. ನೇಗಲಿ, ವಿ.ಆರ್. ಹಾದಿಮನಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ ಇದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/11/2024 03:48 pm