ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೃಂಗೇರಿ : ಶಾರದಾ ಪೀಠದಲ್ಲಿ ನಾಳೆ ಲಕ್ಷ ದೀಪೋತ್ಸವ

ಶೃಂಗೇರಿ: ದಕ್ಷಿಣಾಮಾಯೆ ಶ್ರೀ ಶಾರದಾ ಪೀಠದಲ್ಲಿ ಪ್ರತಿ ವರ್ಷ ನಡೆಯುವ ಲಕ್ಷ ದೀಪೋತ್ಸವವು ನ.15 ರಂದು (ನಾಳೆ) ನಡೆಯಲಿದೆ. ಲಕ್ಷ ದೀಪೋತ್ಸವದ ಅಂಗವಾಗಿ ರಾಜಬೀದಿಯಲ್ಲಿ ತಳಿರು, ತೋರಣ, ರಂಗೋಲಿ ಚಿತ್ತಾರವನ್ನು ಹಾಕಲಾಗುತ್ತದೆ. ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೊದಲ ದೀಪವನ್ನು ಜಗದ್ಗುರುಗಳಾದ ಶ್ರೀಭಾರತೀ ತೀರ್ಥ ಸ್ವಾಮೀಜಿ ಅವರು ದೀಪ ಬೆಳಗುವುದರ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಭಕ್ತಾದಿಗಳು ರಾಜಬೀದಿ ಹಾಗೂ ಶ್ರೀಮಠದ ಆವರಣದಲ್ಲಿ ಇರುವ ಸಹಸ್ರಾರು ದೀಪವನ್ನು ಬೆಳಗಲಿದ್ದಾರೆ.ಶ್ರೀಮಠದ ಆವರಣದಲ್ಲಿರುವ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಬೆಂಗಳೂರಿನ ವಿದುಷಿ ದೀಪ್ತಿ ಹೆಗಡೆ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ (ರಿ) ಹೊನ್ನವಳ್ಳಿ, ಮತ್ತು ಅತಿಥಿ ಕಲಾವಿದರಿಂದ ಪೌರಾಣಿಕ ಯಕ್ಷಗಾನ ವೈಭವ ನಡೆಯಲಿದೆ.

Edited By : PublicNext Desk
PublicNext

PublicNext

14/11/2024 05:13 pm

Cinque Terre

12.43 K

Cinque Terre

0

ಸಂಬಂಧಿತ ಸುದ್ದಿ