ಚಿಕ್ಕಮಗಳೂರು: ದೀಪಾವಳಿಯ ಮುಂದುವರಿದ ಭಾಗವಾದ ಕಾರ್ತಿಕ ದೀಪೋತ್ಸವವು ರಾಜ್ಯದಾದ್ಯಂತ ದೇವಾಲಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿ ಬೆಳ್ಳರಮ್ಮ ಮತ್ತು ಆಂಜನೇಯ ಜಟಿಕ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವು ಅದ್ದೂರಿಯಾಗಿ ನೆರವೇರಿತು.
ದೀಪೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರದ ಮಾಡಲಾಗಿತ್ತು. ನೂರಾರು ದೀಪಗಳನ್ನು ಹಚ್ಚಿದ ಭಕ್ತರು ದೇವರ ದರ್ಶನ ಪಡೆದರು. ನೂರಾರು ಸಂಖ್ಯೆಯಲ್ಲಿ ಸುತ್ತಾಮುತ್ತಲಿನ ಗ್ರಾಮದ ಜನರು ಭಾಗಿಯಾಗಿದ್ದರು.
Kshetra Samachara
29/11/2024 09:28 am