ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಬುದ್ಧ ಗಯಾ ಸಂಪೂರ್ಣ ಅಧಿಕಾರ ಬೌದ್ಧರಿಗೆ ನೀಡಲು ಒತ್ತಾಯಿಸಿ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಕೆ

ಚಿಕ್ಕಮಗಳೂರು : ಬುದ್ಧ ಗಯಾದ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ನೀಡಬೇಕು ಎಂದು ಆಗ್ರಹಿಸಿ ಇಂಟರ್ ನ್ಯಾಷನಲ್ ಬುದ್ದಿಸ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ಹಾಗೂ ಭೀಮಾ ಕೋರೆಗಾಂವ ಸಮಿತಿ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು

ಈ ವೇಳೆ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಬಿಹಾರದ ರಾಜ್ಯದ ಬುದ್ದಗಯಾ ಜಗತ್ತಿನ ಎಲ್ಲಾ ಬೌದ್ಧರಿಗೆ ಪವಿತ್ರವಾದ ಸ್ಥಳ. ಕ್ರಿ.ಪೂ 6ನೇ ಶತಮಾನದಲ್ಲಿ ರಾಜಕುಮಾರ ಸಿದ್ಧಾರ್ಥ ಗೌತಮ 35ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ಭಗವಾನ್ ಬುದ್ಧರಾದ ಕಾರಣಕ್ಕಾಗಿ ಅದು ಪವಿತ್ರ ಸ್ಥಳ ಹಾಗೂ ಪೂಜನೀಯವಾಗಿದೆ ಎಂದರು.

ಮೌರ್ಯ ಸಾಮ್ರಾಜ್ಯದ ದೊರೆ ಅಶೋಕ ಈ ಮಹಾವಿಹಾರವನ್ನು ಕಟ್ಟಿಸಿದ ಕಾಲದಿಂದಲೂ ಅನೇಕ ರಾಜಮಹಾರಾಜರು ಮತ್ತು ಬರ್ಮ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಕೋರಿಯಾ, ಕಾಂಬೋಡಿಯಾ, ತೈವಾನ, ಭೂತಾನ್, ಚೈನ, ಮಯನ್ಮಾರ್ ಮುಂತಾದ ದೇಶಗಳು ಈ ಮಹಾವಿಹಾರಕ್ಕೆ ತನ್ನದೇ ಧಾರ್ಮಿಕ ಕೊಡುಗೆಗಳನ್ನು ನೀಡಿವೆ ಎಂದು ಹೇಳಿದರು.

Edited By : PublicNext Desk
PublicNext

PublicNext

28/11/2024 04:02 pm

Cinque Terre

7.64 K

Cinque Terre

0

ಸಂಬಂಧಿತ ಸುದ್ದಿ