ಮುಲ್ಕಿ: ಮಾನಂಪಾಡಿ ಲೋಕೋಪಯೋಗಿ ರಸ್ತೆಗೆ ಸುಮಾರು ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಅನುದಾನದಿಂದ ರಸ್ತೆ ಅಗಲೀಕರಣ ಮತ್ತು ದಾಮರೀಕರಣಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಅವರ ಮಾತನಾಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು ಮೂಲಭೂತ ಸೌಕರ್ಯಗಳ ಆದ್ಯತೆ ಮುಖ್ಯ ಎಂದರು.
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಮಾಜಿ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಸುನಿಲ್ ಆಳ್ವ ಮತ್ತು ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯರಾದ ಜಯಕುಮಾರ್ ಮಟ್ಟು ಮಾಜೀ ತಾ.ಪಂ ಅಧ್ಯಕ್ಷ ರಂಗನಾಥ ಶೆಟ್ಟಿ ಉದ್ಯಮಿಗಳಾದ ವಾಸು ಎಸ್ ಪೂಜಾರಿ ದೇವಪ್ರಸಾದ್ ಕೆಂಪುಗುಡ್ಡೆ ಮತ್ತು ಗುತ್ತಿಗೆದಾರ ಸತೀಶ್ ಕುಮಾರ್ ಮತ್ತಿತರರು ಇದ್ದರು.
Kshetra Samachara
14/11/2024 11:17 am