ಮಂಗಳೂರು: ರೋಗಿಗಳು ಮತ್ತು ಸಾರ್ವಜನಿಕರಿಗೆ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಔಷಧಿ ವ್ಯವಸ್ಥೆಯನ್ನು ಸುಲಭವಾಗಿ ಗುರುತಿಸಲು ಬಣ್ಣದ ಫಲಕ ಪ್ರದರ್ಶಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸೂಚಿಸಿದ್ದಾರೆ.
ಅಲೋಪತಿ ಚಿಕಿತ್ಸೆ ಪದ್ಧತಿಯನ್ನು ಮಾಡುತ್ತಿರುವವರು ಆಕಾಶ ನೀಲಿ ಬಣ್ಣದ ಫಲಕ ಹಾಗೂ ಆಯುಷ್ ಚಿಕಿತ್ಸಾ ಪದ್ಧತಿ ಅನುಸರಿಸುವವರು ತಿಳಿ ಹಸಿರು ಬಣ್ಣದ ಫಲಕವನ್ನು ಅಳವಡಿಸಿ ಅದರಲ್ಲಿ ನಿಗದಿತ ಮಾಹಿತಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
13/11/2024 10:44 pm