ಪುತ್ತೂರು:ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್, ಡಬ್ಬಲ್ ಚೋಲ್' ಧಾರಣೆ ಏರಿಕೆ ಜತೆಗೆ ಹೊಸ ಅಡಿಕೆ ಧಾರಣೆಯು ಏರುಗತಿಯ ನಿರೀಕ್ಷೆ ಮೂಡಿಸಿದೆ.
ನ.13ರಂದು ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 350-360 ರೂ.ನಲ್ಲಿ ಖರೀದಿಯಾಗಿದೆ. ಕ್ಯಾಂಪ್ಲೋ ಧಾರಣೆ 330 ರೂ.ಯಲ್ಲಿ ಸ್ಥಿರವಾಗಿತ್ತು. ಡಬ್ಬಲ್ ಚೋಲ್ ಧಾರಣೆಯು ಹೊರ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದ್ದು, ಕೆಲವೆಡೆ 510 ರೂ. ತನಕವೂ ಖರೀದಿಸಲಾಗಿದೆ. ಸಿಂಗಲ್ ಚೋಲ್ ಧಾರಣೆ 430ರಿಂದ 435 ರೂ. ತನಕ ಇತ್ತು. ಕ್ಯಾಂಪೋದಲ್ಲಿ ಸಿಂಗಲ್, ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿತ್ತು.
ಡಬ್ಬಲ್ ಚೋಲ್, ಸಿಂಗಲ್ ಚೋಲ್, ಹೊಸ ಅಡಿಕೆ ಧಾರಣೆ ಸದ್ಯದಲ್ಲೇ ಮತ್ತಷ್ಟು ಏರಿಕೆ ಕಾಣಲಿದೆ. ಈ ಪೈಕಿ ಶೀಘ್ರದಲ್ಲೇ ಸಿಂಗಲ್ ಚೋಲ್ ಧಾರಣೆ ಹೆಚ್ಚಾಗುವ ಸಾಧ್ಯತೆ ಇದೆ. ಪಠೋರಕ್ಕೆ ದರ ಏರಿಕೆಯಾದಂತೆ ಹೊಸ ಅಡಿಕೆ ಧಾರಣೆಯಲ್ಲೂ ಹೆಚ್ಚಳ ಕಾಣಲಿದೆ. ಹಿಂದೆ ಒಂದೂವರೆ ತಿಂಗಳಿಗೊಮ್ಮೆ ಧಾರಣೆ ಏರುಪೇರು ಆಗುತ್ತಿತ್ತು. ಈಗ ಹದಿನೈದು ದಿನಗಳಿಗೊಮ್ಮೆ ಏರುಪೇರು ಕಂಡು ಬರುತ್ತಿದ್ದು, ಹಣಕಾಸಿನ ಲಭ್ಯತೆ ಮೇಲೆ ಈ ವ್ಯತ್ಯಾಸ ಘಟಿಸುತ್ತಿದೆ ಎನ್ನುತ್ತಾರೆ ಕೃಷಿ ಮಾರುಕಟ್ಟೆ ತಜ್ಞವಿಶ್ವೇಶ್ವರ ವರ್ಮುಡಿ.
ತೆಂಗಿನ ಕಾಯಿಗೆ ಬೇಡಿಕೆ ಸೃಷ್ಟಿಯಾಗಿದ್ದು, ಹೊರ ಮಾರುಕಟ್ಟೆಯಲ್ಲಿ ಒಣ ಕೆ.ಜಿ.ಗೆ 50 ರೂ.ಯಂತೆ ಖರೀದಿಸಲಾಗಿದೆ. ಕೆಲವು ದಿನಗಳ ಹಿಂದೆ 45 ರೂ. ದರದ ಆಸುಪಾಸಿನಲ್ಲಿದ್ದ ಧಾರಣೆ ಈಗ ಏಕಾಏಕಿ ಏರಿಕೆ ಕಂಡಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
Kshetra Samachara
14/11/2024 10:17 pm