ಉಡುಪಿ: ಸಿದ್ದರಾಮಯ್ಯ ಅವರಿಂದ ಮುಸಲ್ಮಾನರ ತುಷ್ಟೀಕರಣ ಇದೇ ಮೊದಲೇನಲ್ಲ. ಪರಿಶಿಷ್ಟ ಜಾತಿ- ಪಂಗಡ ಮತ್ತು ಒಬಿಸಿ ವರ್ಗಕ್ಕೆ ಈ ಸರ್ಕಾರದಲ್ಲಿ ನ್ಯಾಯ ಇಲ್ಲ. ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಿದರು. ಈ ಬಾರಿ ವಕ್ಫ್ ಆಸ್ತಿಗೆ ಬೇಲಿ ಹಾಕಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗ ಮುಂದುವರೆದು ಸರಕಾರಿ ಕಾಮಗಾರಿಯಲ್ಲೂ ಮುಸಲ್ಮಾನರಿಗೆ ಮೀಸಲಾತಿ ನೀಡಲು ಹೊರಟಿದ್ದಾರೆ. ಈ ಸರಕಾರ ಸರ್ವರ ಸರ್ಕಾರ ಅಲ್ಲ, ಇದೊಂದು ಮುಸ್ಲಿಂ ಸರಕಾರ ಎಂದು ವಾಕ್ ಪ್ರಹಾರ ನಡೆಸಿದರು.
PublicNext
13/11/2024 03:35 pm