ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಕಂದಾವರ ಗ್ರಾ.ಪಂ ನ ಸಾಮಾನ್ಯ ಸಭೆಯಲ್ಲಿ ದಲಿತ ವಿರೋಧಿ ನೀತಿ ವಿರುದ್ದ ಪ್ರತಿಭಟನೆ

ಬಜಪೆ : ಕಂದಾವರ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಲಿತ ಧೋರಣೆಯ ವಿರುದ್ದ ಪಂಚಾಯತ್ ನ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ ನಡೆಯಿತು.ಕಂದಾವರ ಗ್ರಾಮ ಪಂಚಾಯತ್ ನಲ್ಲಿ ಮೂವರು ಪಂಪ್ ಅಪರೇಟರ್ ಗಳನ್ನು ಕೆಲಸದಿಂದ ತೆಗೆದು ಹಾಕಿದ ವಿಚಾರಕ್ಕೆ ಸಂಬಂಧಿಸಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯಲ್ಲಿ ದಲಿತರ ವಿಷಯವೇ ಬರಕೂಡದು ಎಂದ ಆಡಳಿತ ಪಕ್ಷದ ಮಾತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರುಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ.ದಲಿತ ವಿರೋಧಿ ಧೋರಣೆಯನ್ನು ಮಾಡುವಂತಹ ಪಂಚಾಯತ್ ನ ಆಡಳಿತವೆ ಸರಿಯಾಗಿಲ್ಲ.ಹಾಗಾಗಿ ಇಲ್ಲಿನ ಮೂವರು ಪಂಪ್ ಅಪರೇಟರ್ ಗಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಪಂಚಾಯತ್ ನ ಕಾಂಗ್ರೆಸ್ ಸದಸ್ಯರುಗಳು ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕಂದಾವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಅವರು ದಲಿತ ವಿರೋಧಿ ಧೋರಣೆಯನ್ನು ಮಾಡುತ್ತಿರುವ ಗ್ರಾಮ ಪಂಚಾಯತ್ ನ ಆಡಳಿತ ಪಕ್ಷದ ಈ ಕ್ರಮ ಸರಿಯಲ್ಲ. ದಲಿತರ ವಿಚಾರವೇ ಸಾಮಾನ್ಯ ಸಭೆಯಲ್ಲಿ ಮಾತನಾಡಬೇಡಿ ಎಂದ ಆಡಳಿತ ಪಕ್ಷದವರ ಮಾತು ಎಷ್ಟು ಸರಿ.ಇದರಿಂದಾಗಿ ಸಾಮಾನ್ಯ ಸಭೆಯನ್ನು ನಡೆಸಲು ವಿರೋಧ ಮಾಡಿದ್ದೇವೆ.ಕಳೆದ ಮೂರುವರೆ ವರ್ಷದ ಅವಧಿಯಲ್ಲಿ ಮೂವರು ಪಂಪ್ ಅಪರೇಟರ್ ಗಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.ಅವರೆಲ್ಲರೂ ದಲಿತರಾಗಿದ್ದಾರೆ.ಇಂತಹ ಅನ್ಯಾಯ ಮಾಡುತ್ತಿರುವ ಆಡಳಿತ ಪಕ್ಷದ ನಡೆ ಸರಿಯಲ್ಲ ಎಂದು ಹೇಳಿದರು.

Edited By : PublicNext Desk
PublicNext

PublicNext

14/11/2024 05:55 pm

Cinque Terre

9.69 K

Cinque Terre

0

ಸಂಬಂಧಿತ ಸುದ್ದಿ